ಡಿಸಿಎಂಗಳ ನೇಮಕ ಹೈಕಮಾಂಡ್ ಗೆ ಬಿಟ್ಟಿದ್ದು: ಪರಮೇಶ್ವರ್

Prasthutha|

ಬೆಂಗಳೂರು : ಹೆಚ್ಚು ಡಿಸಿಎಂಗಳ ನೇಮಕ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು, ಆ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

- Advertisement -


ಈ ಬಗ್ಗೆ ಸದಾಶಿವನಗರದಲ್ಲಿ ಇಂದು ಮಾತನಾಡಿದ ಅವರು, ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಎಂದರು.


ಬಿಜೆಪಿ ನಾಯಕರ ರಿವರ್ಸ್ ಆಪರೇಷನ್ ವಿಚಾರವಾಗಿ ಪ್ರತಿಕ್ರಿಯಿಸಿ, ಎಲ್ಲವೂ ಗೊತ್ತಾಗುತ್ತದೆ, ಸ್ವಲ್ಪ ದಿನದಲ್ಲೇ ನೋಡಿ. ಯಾರ ಸಂಪರ್ಕದಲ್ಲಿ ಯಾರಿದ್ದಾರೆ ಅನ್ನೋದು ತಿಳಿಯಲಿದೆ ಎಂದು ಹೇಳಿದರು.



Join Whatsapp