ನೌಕಾಪಡೆಗೆ ಮೊತ್ತಮೊದಲ ಮಹಿಳಾ ಕಮಾಂಡಿಂಗ್‌ ಆಫೀಸರ್‌ ನೇಮಕ

Prasthutha|

ನವದೆಹಲಿ: ಎಲ್ಲ ಶ್ರೇಣಿಯ ಹುದ್ದೆಗಳಿಗೂ ಮಹಿಳೆಯರನ್ನು ನೇಮಕ ಮಾಡಬೇಕು ಎಂಬ ಆಶಯದಂತೆ ಭಾರತೀಯ ನೌಕಾಪಡೆ ಮೊದಲ ಮಹಿಳಾ ಕಮಾಂಡಿಂಗ್ ಆಫೀಸರ್‌‌ನ್ನು ನೇಮಕ ಮಾಡಿದೆ ಎಂದು ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್‌. ಹರಿ ಕುಮಾರ್ ಹೇಳಿದ್ದಾರೆ. ನೌಕಾಪಡೆ ದಿನದ ಅಂಗವಸಗಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ನೌಕಾಪಡೆಯಲ್ಲಿನ ಒಟ್ಟು ಮಹಿಳಾ ಅಗ್ನಿವೀರರ ಸಂಖ್ಯೆ ಸಾವಿರ ಗಡಿ ದಾಟಿದೆ ಎಂದು ಹೇಳಿದ್ದಾರೆ.

- Advertisement -

ಕಳೆದ ಒಂದು ವರ್ಷದ ಅವಧಿಯಲ್ಲಿ ಕಡಲ ಗಡಿಯ ರಕ್ಷಣೆಗೆ ಸಂಬಂಧಿಸಿ ನೌಕಾಪಡೆ ತನ್ನ ಕಾರ್ಯಾಚರಣೆಯ ಸನ್ನದ್ಧತೆಯನ್ನು ಮೇಲ್ದರ್ಜೆಗೇರಿಸಿದೆ. ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಹಾಗೂ ಯುದ್ಧವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ ಎಂದು ತಿಳಿಸಿದರು.

ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಮಿಲಿಟರಿ ಚಟುವಟಿಕೆಗಳು ನಡೆಯುತ್ತಿದ್ದು, ಅದರ ಮೇಲೆ ನೌಕಾಪಡೆ ನಿಗಾ ಇರಿಸಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹರಿ ಕುಮಾರ್ ಹೇಳಿದರು. ಹಿಂದೂ ಮಹಾಸಾಗರ ಗಡಿ ರಕ್ಷಣೆ ಹಾಗೂ ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡಲು ನೌಕಾಪಡೆ ಒತ್ತು ನೀಡುತ್ತಿದೆ. ಈ ಸಂಬಂಧ ಅಗತ್ಯಕ್ಕೆ ತಕ್ಕಷ್ಟು ಯುದ್ಧನೌಕೆಗಳು, ಜಲಾಂತರ್ಗಾಮಿಗಳು ಸೇರಿದಂತೆ ಅಗತ್ಯ ರಕ್ಷಣಾ ವ್ಯವಸ್ಥೆಗಳ ನಿಯೋಜನೆ ಮಾಡಲಾಗಿದೆ ಎಂದು ಅಡ್ಮಿರಲ್ ಆರ್‌.ಹರಿ ಕುಮಾರ್‌ ಹೇಳಿದ್ದಾರೆ.



Join Whatsapp