ಬೆಂಗಳೂರು: ಫ್ಯಾನ್ಸಿ ನಂಬರ್ ಗಳ ಹರಾಜಿನ ಮೂಲಕ ಅಧಿಕ ಆದಾಯ ಗಳಿಸುತ್ತಿರುವ ರಾಜ್ಯ ಸಾರಿಗೆ ಇಲಾಖೆಯು ‘ಕೆಎ 50 ಎಂಡಿ’ ಸರಣಿಗೆ ಅರ್ಜಿ ಆಹ್ವಾನಿಸಿದೆ.
ಸಾರಿಗೆ ಇಲಾಖೆಯು ಕರ್ನಾಟಕ ಮೋಟಾರು ವಾಹನ ನಿಯಮಗಳು, 1989 ರ ನಿಯಮ 46 (ಎಎ) 1 ರಿಂದ 999 ರ ನಡುವಿನ ಲಘು ಮೋಟಾರು ವಾಹನಗಳಿಗೆ ಫ್ಯಾನ್ಸಿ ನೋಂದಣಿ ಸಂಖ್ಯೆಗಳನ್ನು ಹಂಚಿಕೆ ಮಾಡಲು ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತದೆ.
ಈ ಬಾರಿ ‘ಕೆಎ 50 ಎಂಡಿ’ ಸರಣಿಯ ಹರಾಜು ಪ್ರಕ್ರಿಯೆಯು ಏ.18ರಂದು ಮಧ್ಯಾಹ್ನ 12 ಗಂಟೆಗೆ ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯಲ್ಲಿ ನಡೆಯಲಿದೆ. ಆಸಕ್ತರು ಕಾರ್ಯದರ್ಶಿ, ರಾಜ್ಯ ಸಾರಿಗೆ ಪ್ರಾಧಿಕಾರ, ಬೆಂಗಳೂರು. ಈ ಹೆಸರಿನಲ್ಲಿ 75,000 ರೂ. ಡಿಮ್ಯಾಂಡ್ ಡ್ರಾಫ್ಟ್ ನೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಜೊತೆ ಡಿಡಿ ಯನ್ನು ಏಪ್ರಿಲ್ 18ರ ಮಧ್ಯಾಹ್ನ 12 ಗಂಟೆಯೊಳಗೆ ಸಲ್ಲಿಸಬೇಕು.