ಐಫೋನ್ ಉತ್ಪಾದನೆಯನ್ನು ಚೀನಾದಿಂದ ಸ್ಥಳಾಂತರಿಸಲು ಆ್ಯಪಲ್ ನಿರ್ಧಾರ

Prasthutha|

ನವದೆಹಲಿ: ಟೆಕ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ಚೀನಾದಲ್ಲಿನ ಬಹುಪಾಲು ಉತ್ಪಾದನಾ ಘಟಕಗಳನ್ನು ಇತರ ದೇಶಗಳಿಗೆ ಸ್ಥಳಾಂತರಿಸಲು ಮುಂದಾಗಿದೆ.

- Advertisement -

ಚೀನಾದಲ್ಲಿ ಕೋವಿಡ್ ಲಾಕ್ ಡೌನ್ ಮತ್ತು ಸರ್ಕಾರದ ವಿವಿಧ ನಿರ್ಬಂಧಗಳು ಹಾಗೂ, ಝೆಂಗ್ ಹೌ ಉತ್ಪಾದನಾ ಘಟಕದಲ್ಲಿ ನಡೆದ ಕಾರ್ಮಿಕರ ನಡುವಿನ ಗಲಭೆ, ಪ್ರತಿಭಟನೆ ಹಿನ್ನೆಲೆಯಲ್ಲಿ ಕಂಪನಿ ಉತ್ಪಾದನಾ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗಳಿಗೆ ಸ್ಥಳಾಂತರಿಸಲು ಮುಂದಾಗಿದೆ.

ಐಫೋನ್ ಫ್ಯಾಕ್ಟರಿಯಲ್ಲಿ ಉತ್ಪಾದನೆ ಸ್ಥಗಿತಗೊಂಡ ಪರಿಣಾಮ, ಜಾಗತಿಕ ಪೂರೈಕೆ ಸರಪಣಿಗೆ ಸಮಸ್ಯೆ ಉಂಟಾಗಿದೆ. ಮುಂದೆ, ಅಂತಹ ಸಮಸ್ಯೆ ಎದುರಾಗದಿರಲು ಐಫೋನ್ ತಯಾರಿಸುವ ಉದ್ಯಮ ಪಾಲುದಾರ ಕಂಪನಿಗಳ ಜತೆ ಮಾತುಕತೆ ನಡೆಸಲು ಆ್ಯಪಲ್ ಆಡಳಿತ ಮಂಡಳಿ ನಿರ್ಧರಿಸಿದೆ.



Join Whatsapp