ಮಡಿಕೇರಿ: ತುಂಬು ಗರ್ಭಿಣಿಯ ಕುಟುಂಬಕ್ಕೆ ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಆಲೂರು ಗ್ರಾಮ ಪಂಚಾಯಿತಿಗೆ ಕರವೇ ಮನವಿ

Prasthutha|

ಮಡಿಕೇರಿ: ತುಂಬು ಗರ್ಭಿಣಿಯ ಕುಟುಂಬಕ್ಕೆ  ಶುದ್ಧವಾದ ಕುಡಿಯುವ ನೀರು ಒದಗಿಸುವಂತೆ ಆಲೂರು ಗ್ರಾಮ ಪಂಚಾಯಿತಿಗೆ ಕರವೇ ಮನವಿ ಮಾಡಿದೆ.

- Advertisement -

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ  ಶನಿವಾರಸಂತೆ ಹೋಬಳಿ ಸೇರಿದ ಆಲೂರು ಗ್ರಾಮ ಪಂಚಾಯಿತಿಯ ಮೆಣಸ ಗ್ರಾಮದ  ಷಣ್ಮುಖ ಎಂಬುವವರ ಮನೆಗೆ ಪಂಚಾಯಿತಿಯಿಂದ ನೀರು ಬರದೆ 5 ವರ್ಷಗಳು ಕಳೆದಿದೆ ಇವರ ಕುಟುಂಬದಲ್ಲಿ  8ತಿಂಗಳ ತುಂಬು ಗರ್ಭಿಣಿ ಇದ್ದು. ಸರ್ಕಾರದಿಂದ ನೀರಿನ ವ್ಯವಸ್ಥೆಗೆ ಲಕ್ಷಗಟ್ಟಲೆ ಹಣ ಹರಿದು ಬಂದರೂ ಈ ಆಲೂರು ಗ್ರಾಮ ಪಂಚಾಯಿತಿ ಯವರು ಏನು ಮಾಡುತ್ತಿದ್ದಾರೆ ಎಂದು ಕರವೇ ಪ್ರಶ್ನಿಸಿದೆ.

5 ವರ್ಷದಿಂದ ಈ ಕುಟುಂಬದವರು ತುಂಬಾ ದೂರದಿಂದಲೇ ನೀರು ಹೊತ್ತು ತರುತ್ತಿದ್ದು, ಈ ಕುಟುಂಬದವರು  ಆಲೂರು ಪಂಚಾಯಿತಿಯವರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನ ಕಾಣಲಿಲ್ಲ.   ಹಾಗಾಗಿ ಈ ಕುಟುಂಬದವರು ಕರ್ನಾಟಕ ರಕ್ಷಣಾ ವೇದಿಕೆಯ ಮೊರೆ ಹೋಗಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಖುದ್ದಾಗಿ ಈ ಕುಟುಂಬವನ್ನು  ಭೇಟಿ ಮಾಡಿ ಪರಿಸ್ಥಿತಿಯನ್ನು ನೋಡಿ ಈ ಕುಟುಂಬದ ಮುಖ್ಯಸ್ಥರಾದ ಷಣ್ಮುಖ ರವರನ್ನು ಆಲೂರು ಗ್ರಾಮ ಪಂಚಾಯಿತಿಗೆ  ಕರೆದುಕೊಂಡು ಹೋಗಿ ಮನವಿ ಪತ್ರವನ್ನು ಕೊಡಲಾಗಿದೆ.

- Advertisement -

ಈ ಮನವಿಗೆ ಸ್ಪಂದಿಸದೇ ಹೋದರೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಆಲೂರು ಪಂಚಾಯಿತಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ತಿಳಿಸಿದೆ.



Join Whatsapp