ಚಂದ್ರದರ್ಶನದ ವಿಚಾರದಲ್ಲಿ ಒಮ್ಮತದ ತೀರ್ಮಾನಕ್ಕೆ ಮನವಿ

Prasthutha|

ಮಂಗಳೂರು: ಚಂದ್ರ ದರ್ಶನದ ಹಿನ್ನೆಲೆಯಲ್ಲಿ ಇಸ್ಲಾಮಿಕ್ ತಿಂಗಳುಗಳನ್ನು ಲೆಕ್ಕ ಹಾಕಲಾಗುತ್ತದೆ. ಈ ಹಿನ್ನೆಲೆಯಲ್ಲಿ  ಚಂದ್ರ ದರ್ಶನದ ವಿಚಾರದಲ್ಲಿ ಖಾಝಿಗಳು ಒಮ್ಮತದ ಅಭಿಪ್ರಾಯ ತಿಳಿಸಬೇಕೆಂದು ಉಳ್ಳಾಲ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮನವಿ ಮಾಡಿದ್ದಾರೆ.

- Advertisement -

ಈದುಲ್ ಫಿತ್ರ್  ಆಚರಣೆ ವಿಚಾರದಲ್ಲಿ ಮಂಗಳೂರು ಉಡುಪಿ ಮಾತ್ರವಲ್ಲದೆ ಕಾಸರಗೋಡಿನ ಖಾಝಿಗಳು ಜೊತೆಯಾಗಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕೆಂದು ವಿನಂತಿಸಿದ್ದಾರೆ. ರಮಝಾನ್ ಹಬ್ಬದ ಚಂದ್ರದರ್ಶನದ ಸಂದರ್ಭದಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.



Join Whatsapp