ನರ್ಸ್ ಗಳ ಬ್ಯೂಟಿ ಬಗ್ಗೆ ಮಾತನಾಡಿದ್ದ ಶಾಸಕ ರಾಜು ಕಾಗೆ ಕ್ಷಮೆಯಾಚನೆ

Prasthutha|

ಬೆಳಗಾವಿ: ಮಹಿಳಾ ನರ್ಸ್​ಗಳ ಸೌಂದರ್ಯದ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡಿದ್ದ ಕಾಂಗ್ರೆಸ್ ಶಾಸಕ ರಾಜು ಕಾಗೆ ಕ್ಷಮೆ ಯಾಚಿಸಿದ್ದಾರೆ.

- Advertisement -

ನಿನ್ನೆ ಸಮಾರಂಭದಲ್ಲಿ ಮಾತನಾಡಿದ್ದು ಯಾರನ್ನೂ ಕುರಿತು ಆಗಿರಲ್ಲ. ನಾಲ್ಕು ಗೋಡೆಯಲ್ಲಿ ಮಾತನಾಡಿದ್ದಲ್ಲ. ಮುದುಕನಾದನಲ್ಲ ಅಂತಾ ಮನಸ್ಸಿಗೆ ನೋವಾಯ್ತು ಅಂತಾ ಹೇಳಿದ್ದೇನೆ. ನನ್ನ ಮಾತಿನಿಂದ ಏನಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತಿದ್ದೇನೆ ಎಂದು ತಮ್ಮ ಹೇಳಿಕೆಯ ಬಗ್ಗೆ ಸ್ಪಷ್ಟನೆ ಕೊಟ್ಟು ಕ್ಷಮೆ ಕೋರಿದ್ದಾರೆ.

ನರ್ಸ್‌ಗಳು, ಚೆಂದದ ಹುಡುಗಿಯರು ನನ್ನನ್ನು ಅಜ್ಜ ಅಂದಾಗ ನನಗೆ ಬೇಸರವಾಗಿತ್ತು ಎಂದು ಶಾಸಕ ರಾಜುಕಾಗೆ ಹೇಳಿದ್ದರು. ಬೆಳಗಾವಿ ಬೆಳಗಾವಿ ತಾಲೂಕಿನ ಅವರಖೋಡ ಗ್ರಾಮದಲ್ಲಿ ದಸರಾ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೀಗೆ ಹೇಳಿದ್ದರು.

- Advertisement -

ಲಿವರ್ ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆಗಾಗಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.

Join Whatsapp