ಎಲ್ಲರಿಗೂ ಕ್ಷಮಾದಾನ, ಮಹಿಳೆಯರು ಕೂಡ ಸರ್ಕಾರದಲ್ಲಿ ಪಾಲುದಾರರಾಗಿ: ತಾಲಿಬಾನ್ ಕರೆ

Prasthutha|

ಕಾಬೂಲ್: ಎಲ್ಲರಿಗೂ ಕ್ಷಮಾದಾನ ನೀಡಲಾಗಿದೆ. ಮಹಿಳೆಯರು ಕೂಡ ಸರಕಾರದ ಭಾಗವಾಬೇಕು ಎಂದು ತಾಲಿಬಾನ್ ಹಿಡಿತದಲ್ಲಿರುವ ಟೀವಿಯಲ್ಲಿ ಇಸ್ಲಾಮಿಕ್ ಎಮಿರೇಟ್ಸ್ ನ ಸಾಂಸ್ಕೃತಿಕ ಆಯೋಗದ ಸದಸ್ಯ ಎನಾಮುಲ್ಲಾ ಸಮಂಗಾನಿ ಮಂಗಳವಾರ ಕರೆ ನೀಡಿದ್ದಾರೆ.

- Advertisement -


ಮಹಿಳೆಯರು ಬಲಿಪಶು ಆಗುವುದನ್ನು ಇಸ್ಲಾಮಿಕ್ ಎಮಿರೇಟ್ಸ್ ಬಯಸುವುದಿಲ್ಲ ಎಂದೂ ಅವರು ಹೇಳಿರುವರು.
ಮುಂದಿನ ಸರಕಾರ ಹೇಗಿರುತ್ತದೆ ಎಂದು ಇನ್ನೂ ಸ್ಪಷ್ಟವಿಲ್ಲ. ಅನುಭವದ ಮೇಲೆ ಹೇಳುವುದಾದರೆ ಅಲ್ಲಿ ಇಸ್ಲಾಮಿಕ್ ನಾಯಕತ್ವವೇ ಇರುತ್ತದೆ. ಎಲ್ಲ ಕಡೆಯವರೂ ಅದರಲ್ಲಿ ಸೇರಬೇಕು. ತಾಲಿಬಾನಿಗರು ಕಾಬೂಲ್ ವಶಪಡಿಸಿಕೊಳ್ಳುವಾಗ ಯಾವುದೇ ಹಿಂಸಾಚಾರ, ದಬ್ಬಾಳಿಕೆ ನಡೆದ ಬಗ್ಗೆ ವರದಿಯಿಲ್ಲ. ಆದರೆ ಬಹಳ ಜನ ಹೆದರಿದ್ದು, ಒಂದೋ ಮುಚ್ಚಿದ ಬಾಗಿಲೊಳಗೆ ಉಳಿದಿದ್ದಾರೆ. ಇಲ್ಲವೇ ದೇಶ ಬಿಡುವ ಆತುರ ತೋರಿದ್ದು ವ್ಯಕ್ತವಾಗಿದೆ. ಇದಕ್ಕೆ ಮುಖ್ಯ ಕಾರಣ ಎಲ್ಲ ಸೆರೆಯಾಳುಗಳನ್ನು ಬಿಡುಗಡೆ ಮಾಡಿರುವುದು ಮತ್ತು ಸರಕಾರೀ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿರುವುದಾಗಿದೆ ಎಂದು ಅವರು ತಿಳಿಸಿದರು.


ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಅಫ್ಘಾನಿಸ್ತಾನದಿಂದ ಸೇನೆ ಹಿಂತೆಗೆದುಕೊಳ್ಳುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅಫ್ಘಾನಿಸ್ತಾನದ ಉದ್ದಗಲಕ್ಕೆ ಸಾವಿರಾರು ಜನ ಗಾಯಾಳುಗಳು ಇದ್ದಾರೆ ಎಂದು ರೆಡ್ ಕ್ರಾಸ್ ಸಂಸ್ಥೆ ಹೇಳಿದೆ. 10 ದಿನಗಳ ಕಾಲ ನಡೆದ ಯುದ್ಧ ಇದಕ್ಕೆ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಅಫ್ಘಾನಿಸ್ತಾನದಲ್ಲಿ ನ್ಯಾಟೋದ ನಾಗರಿಕ ಪ್ರತಿನಿಧಿ ಆಗಿರುವ ಸ್ಟೆಫಾನೊ ಪೋಂಟೆಕೋರ್ವೊ ಅವರು ವೀಡಿಯೋ ಹಾಕಿ ಅಮೆರಿಕದವರ ವಿಮಾನಗಳು ಬರುತ್ತಿವೆ, ಹೋಗುತ್ತಿವೆ. ಇತರ ಸರಕಾರದ ವಿಮಾನಗಳೂ ಹೋಗುತ್ತಿವೆ, ಜನಸಾಮಾನ್ಯರಿಗೆ ಮಾತ್ರ ವಿಮಾನಗಳು ಲಭ್ಯವಿಲ್ಲ ಎಂದು ಆರೋಪಿಸಿದ್ದಾರೆ.
ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರು ಹಿಂದಿನ ಅಧ್ಯಕ್ಷ ಹಮೀದ್ ಕರ್ಜಾಯಿ, ದೇಶದ ಸಂಧಾನ ಸಮಿತಿಯ ಮುಖ್ಯಸ್ಥರಾಗಿದ್ದ ಅಬ್ದುಲ್ಲಾ ಅಬ್ದುಲ್ಲಾ ಹಾಗೂ ಎಲ್ಲ ಸರಕಾರಿ ಅಧಿಕಾರಿಗಳು ಮತ್ತು ತಾಲಿಬಾನ್ ನಾಯಕರ ನಡುವೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

- Advertisement -


ಒಂದು ಕಾಲದ ತಾಲಿಬಾನ್ ಸರಕಾರದ ಉನ್ನತ ಶಿಕ್ಷಣ ಸಚಿವ ಮತ್ತು ತಾಲಿಬಾನ್ ನಾಯಕ ಅಮೀರ್ ಖಾನ್ ಮುತ್ತಕಿಯವರು ಕತಾರ್ ನಿಂದ ಹಿಂದಿರುಗಿದ್ದು ಅಮೆರಿಕದ ಅಧಿಕಾರಿಗಳಿಂದ ಹಿಡಿದು ಸ್ಥಳೀಯ ಅಧಿಕಾರಿಗಳು ಮತ್ತು ಎಲ್ಲ ರಾಜಕೀಯ ನಾಯಕರ ನಡುವೆ ಸಮನ್ವಯ ಸಾಧಿಸುವ ಪ್ರಯತ್ನ ಮುಂದುವರಿಸಿದ್ದಾರೆ.



Join Whatsapp