ಮಗಳಿಗೆ ಕಂಪೆನಿಯಲ್ಲಿ ನಿರಾಸಕ್ತಿ: ಬಿಸ್ಲೆರಿ ಮಾರಾಟಕ್ಕೆ ಮುಂದಾದ ರಮೇಶ್ ಚೌಹಾಣ್

Prasthutha|

ನವದೆಹಲಿ: ಭಾರತದಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರು ಸರಬರಾಜು ಕಂಪೆನಿ ಬಿಸ್ಲೆರಿಯಲ್ಲಿ ಮಗಳು ನಿರಾಸಕ್ತಿ ಹೊಂದಿರುವ ಕಾರಣ ಅದನ್ನು ಟಾಟಾ ಕಂಪೆನಿಗೆ ಮಾರಾಟ ಮಾಡುವುದಾಗಿ ಬಿಸ್ಲೆರಿ ಕಂಪೆನಿಯ ಮಾಲಕ ರಮೇಶ್ ಜೆ. ಚೌಹಾನ್ ತಿಳಿಸಿದ್ದಾರೆ.

- Advertisement -

ಭಾರತದಲ್ಲಿ ಪ್ರಖ್ಯಾತವಾಗಿರುವ ಥಮ್ಸ್ ಅಪ್, ಗೋಲ್ಡ್ ಸ್ಪಾ ಮತ್ತು ಲಿಮ್ಕಾ ತಂಪು ಪಾನೀಯ ಬ್ಯಾಂಡ್’ನ ಅಧ್ಯಕ್ಷ ಮತ್ತು ಸುಮಾರು 3 ದಶಕಗಳ ಕಾಲ ಬಿಸ್ಲೆರಿಯನ್ನು ಮುನ್ನಡೆಸಿದ ರಮೇಶ್ ಅವರು ತನ್ನ ಕಂಪೆನಿಯನ್ನು ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ ಲಿಮಿಟೆಡ್ ಕಂಪೆನಿಗೆ 6 ರಿಂದ 7 ಸಾವಿರ ಕೋಟಿ ರೂ.ಗೆ ಮಾರಲು ನಿರ್ಧರಿಸಿದ್ದಾರೆ.

ರಮೇಶ್ ಚೌಹಾಣ್ ಅವರ ಮಗಳು ಜಯಂತಿ ಅವರು ತಂದೆಯ ವ್ಯವಹಾರದಲ್ಲಿ ನಿರಾಸಕ್ತಿ ಹೊಂದಿರುವ ಹಿನ್ನೆಲೆಯಲ್ಲಿ ಚೌಹಾಣ್ ಅವರು ಬಿಸ್ಲೆರಿಯನ್ನು ಮಾರಲು ನಿರ್ಧರಿಸಿದ್ದಾರೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಬಿಸ್ಲೆರಿಯನ್ನು ಮಾರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಆದರೆ ಟಾಟಾ ಸಂಸ್ಥೆ ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲಿದೆ. ಅದೇ ರೀತಿ ಗುಣಮಟ್ಟ ಮತ್ತು ಮೌಲ್ಯವನ್ನು ಕಾಪಾಡಲಿದೆ ಎಂದು ವಿಶ್ವಾಸವಿರಿಸಿದ್ದೇನೆ ಎಂದು ತಿಳಿಸಿದ್ದಾರೆ.

ಪ್ಯಾಕೇಜ್ಡ್ ಮೂಲತಃ ಇಟಾಲಿಯನ್ ಬ್ರಾಂಡ್ ಆಗಿದೆ. ಇದು 1965 ಭಾರತದ ಮುಂಬೈಗೆ ಲಗ್ಗೆ ಇರಿಸಿದ್ದು, 1969ರಲ್ಲಿ ಚೌಹಾಣ್ ಕುಟುಂಬ ಅದನ್ನು ಸ್ವಾಧೀನಪಡಿಸಿತ್ತು.

ಈ ಮಧ್ಯೆ ಬಿಸ್ಲೆರಿ ಕಂಪೆನಿ ಟಾಟಾ ಪಾಲಾಗುವುದು ಬಹುತೇಕ ಖಚಿತವಾಗಿದೆ.



Join Whatsapp