ಬೆಂಗಳೂರಿನಲ್ಲಿ ಅಪಾರ್ಟ್ ಮೆಂಟ್ ಗೆ ಬೆಂಕಿ | ಮನೆ ಮಾಲಕಿಯ ಜೀವ ಉಳಿಸಿದ “ಶ್ವಾನ”

Prasthutha|

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಸಂಪಿಗೆ ನಗರದಲ್ಲಿರುವ ವಸುಂದರ ಲೇಔಟ್ನಲ್ಲಿ ಬುಧವಾರ ಸಂಜೆಯ ವೇಳೆ ಅಗ್ನಿ ಅವಘಡ ಸಂಭವಿಸಿತ್ತು. ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ಹೆಚ್ಚಿನ ಹಾನಿಯಾಗುವ ಮೊದಲು ಬೆಂಕಿಯನ್ನು ನಂದಿಸಿತ್ತು..

- Advertisement -

ಎರಡು ಪ್ಲ್ಯಾಟ್ ಗಳಿಗೆ ಬೆಂಕಿ ಕಾಣಿಸುತ್ತಿದ್ದಂತೆ ಪ್ಲ್ಯಾಟ್ ನಲ್ಲಿದ್ದವರು ಹೊರಗೆ ಹೋಗಿದ್ದರಿಂದ ಯಾವುದೇ ಅಪಾಯ ಆಗಿರಲಿಲ್ಲ. ಫ್ಲಾಟಿನಲ್ಲಿ ಮೊದಲು ವಿಜಯ್ ಪಿಳ್ಳೆ ಎಂಬವರಿಗೆ ಸೇರಿದ ಬೆಡ್ ರೂಮಿನಲ್ಲಿ ಬೆಂಕಿ ಆವರಿಸಿಕೊಂಡಿದೆ. ಬೆಂಕಿ ಅವಘಡ ಸಂಭವಿಸಿದಾಗ ಮನೆಯಲ್ಲಿ ವಿಜಯ್ ಪಿಳ್ಳೆ ಅವರ 60 ವರ್ಷ ತಾಯಿಯೊಬ್ಬರೇ ಇದ್ದರು. ವೃದ್ಧ ತಾಯಿಗೆ ಮೊದಲು ಅಗ್ನಿ ಅವಘಡದ ಬಗ್ಗೆ ಗೊತ್ತಾಗಿರಲಿಲ್ಲ. ಆದರೆ ಮನೆಯಲ್ಲಿದ್ದ ಸಾಕು ನಾಯಿ “ಅಪ್ಪು” ಮಾಲಕಿಯ ಮನೆಗೆ ಬೆಂಕಿ ಬಿದ್ದಿದ್ದನ್ನು ಕಂಡು ಜೋರಾಗಿ ಬೊಗಳಿದೆ. ಸಾಕು ನಾಯಿ ಅಪ್ಪು ಬೊಗಳಿ ಶಬ್ದ ಮಾಡಿ ಅಜ್ಜಿಗೆ ಎಚ್ಚರವಾಗುವಂತೆ ಮಾಡಿದೆ ಎನ್ನಲಾಗಿದೆ.

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೃದ್ದ ತಾಯಿ, ಬೆಡ್ ರೂಮಿನಲ್ಲಿ ನಿದ್ದೆಯಲ್ಲಿದ್ದರು ಎನ್ನಲಾಗಿದ್ದು, ನಾಯಿಯ ಬೊಗಳುವಿಕೆಯಿಂದ ಎಚ್ಚರಗೊಂಡಿದ್ದಾರೆ. ನಾಯಿಯು ಶಬ್ದ ಮಾಡಿದ್ದರಿಂದ ಎಚ್ಚರಗೊಂಡಾಗ ಬೆಂಕಿ ಹೊತ್ತಿಕೊಂಡಿರುವುದು ಅಜ್ಜಿ ಗಮನಕ್ಕೆ ಬಂದಿದೆ. ಕೂಡಲೇ ಹೊರ ಬಂದ ಅಜ್ಜಿಯ ಪ್ರಾಣವೂ ಉಳಿದಿದೆ. ವೃದ್ಧೆಯನ್ನು ಮಾತ್ರವಲ್ಲದೇ ಇಡೀ ಅಪಾರ್ಟ್ ಮೆಂಟ್ ನಿವಾಸಿಗಳನ್ನು ಬೆಂಕಿ ಅವಘಡದಿಂದ ಶ್ವಾನ ರಕ್ಷಿಸಿದೆ. ಅಗ್ನಿಶಾಮಕ ದಳ ಅಧಿಕಾರಿ ನಾಗೇಶ್ ಸಾಕು ನಾಯಿಯ ಕಾರ್ಯಕ್ಕೆ ಶ್ಲಾಘನೆಯನ್ನೂ ವ್ಯಕ್ತಪಡಿಸಿದ್ದಾರೆ.

Join Whatsapp