ಮಲೇಷ್ಯಾದಿಂದ ಹಿಂದಿರುಗಿದ ಎ.ಪಿ. ಉಸ್ತಾದ್ ಗೆ ಅದ್ಧೂರಿ ಸ್ವಾಗತ

Prasthutha|

- Advertisement -

ಕಲ್ಲಿಕೋಟೆ: ಮಲೇಷ್ಯಾ ಸರ್ಕಾರದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿ ಹಿಂದಿರುಗಿದ ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ನೇತೃತ್ವದ ಸುನ್ನಿ ಕಾರ್ಯಕರ್ತರು ಆತ್ಮೀಯವಾಗಿ ಸ್ವಾಗತಿಸಿದರು.
ಮಲೇಷ್ಯಾ ಸರ್ಕಾರದ ವಿಶೇಷ ಚಾರ್ಟರ್ಡ್ ವಿಮಾನದಲ್ಲಿ ಕಾಂತಪುರಂ ಉಸ್ತಾದ್ ಇಂದು ಬೆಳಿಗ್ಗೆ ಕರಿಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು.


ಕಾಂತಪುರಂ ಉಸ್ತಾದ್ ಅವರನ್ನು ಸ್ವಾಗತಿಸಲು ಬೆಳಿಗ್ಗೆ 6 ಗಂಟೆಯಿಂದಲೇ ಹೆಚ್ಚಿನ ಸಂಖ್ಯೆಯ ಜನರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಎಮಿಗ್ರೇಶನ್ ಬಳಿಕ 9 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದ ಹೊರಬರುತ್ತಿದ್ದಂತೆಯೇ ಜನರು ತಕ್ಬೀರ್ ನೊಂದಿಗೆ ಸ್ವಾಗತಿಸಿದರು.

- Advertisement -


ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಮುಖಂಡರಾದ ರಈಸುಲ್ ಉಲಮಾ ಇ. ಸುಲೈಮಾನ್ ಮುಸ್ಲಿಯಾರ್, ಸಯ್ಯಿದ್ ಅಲಿ ಬಾಫಕಿ ತಂಙಳ್, ಸಯ್ಯದ್ ಇಬ್ರಾಹಿಂ ಖಲೀಲ್ ಅಲ್ ಬುಖಾರಿ, ಪೇರೋಡು ಅಬ್ದುರ್ರಹ್ಮಾನ್ ಸಖಾಫಿ ಮುಂತಾದವರು ಕಾಂತಪುರಂ ಉಸ್ತಾದ್ ರನ್ನು ಬರಮಾಡಿಕೊಂಡರು.
ನೂರಾರು ವಾಹನಗಳ ಬೆಂಗಾವಲಿನಲ್ಲಿ ಕಾರಂದೂರು ಮರ್ಕಝ್ ಗೆ ತಲುಪಿದ ಕಾಂತಪುರಂ ಉಸ್ತಾದರನ್ನು ಮಂತ್ರಿ ಮಾಗಧರು, ಜನಪ್ರತಿನಿಧಿಗಳು ಹಾಗೂ ಪ್ರಮುಖ ವ್ಯಕ್ತಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು ಎಂದು ಮೂಲಗಳು ತಿಳಿಸಿವೆ.



Join Whatsapp