ನನ್ನ ಮುಂದಿನ ರಾಜಕೀಯ ಕಾಲಚಕ್ರದಲ್ಲಿ ಏನೂ ಸಂಭವಿಸಬಹುದು!: ಬಿಜೆಪಿ ಎಮ್ ಎಲ್ ಸಿ ಹೆಚ್ ವಿಶ್ವನಾಥ್

Prasthutha|

ಮೈಸೂರು: ‘ನನ್ನ ಮುಂದಿನ ರಾಜಕೀಯ ಭವಿಷ್ಯದ ಕಾಲಚಕ್ರದಲ್ಲಿ ಏನೂ ಸಂಭವಿಸಬಹುದು’ ಎಂದು ಮಾಜಿ ಜೆಡಿಎಸ್ ಮುಖಂಡ ಹಾಗೂ ಹಾಲಿ ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಹೇಳಿದ್ದಾರೆ.

- Advertisement -

ನೀವು ಮತ್ತೆ ಕಾಂಗ್ರೆಸ್ ಸೇರುವಿರಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೆಚ್ ವಿಶ್ವನಾಥ್ ಈ ಬಗೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ನನ್ನ ನಲವತ್ತು ವರ್ಷದ ರಾಜಕೀಯ ಜೀವನದಲ್ಲಿ ಹಲವು ಬದಲಾವಣೆಗಳನ್ನು ನಾನು ಕಂಡಿದ್ದೇನೆ, ನಾನು ಅನುಭವಿಸಿದ್ದೇನೆ. ಇನ್ನು ಮುಂದಿನ ರಾಜಕೀಯ ಭವಿಷ್ಯವೂ ಕೂಡ ಹೇಳೋಕ್ಕಾಗಲ್ಲ ಎಂದಿದ್ದಾರೆ.

- Advertisement -

ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್ ಮತ್ತಷ್ಟು ಬಲವರ್ಧನೆಯಾಗುತ್ತಿದೆ ಎಂದೂ ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

Join Whatsapp