#AntiNationalBJPArnab ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್! | ಪುಲ್ವಾಮ ಉಗ್ರ ದಾಳಿ ಸಂಭ್ರಮಿಸಿದ್ದ ಗೋಸ್ವಾಮಿ ವಿರುದ್ಧ ವ್ಯಾಪಕ ಆಕ್ರೋಶ

Prasthutha|

ನವದೆಹಲಿ : 2019ರ ಫೆ.14ರಂದು 40 ಯೋಧರ ಬಲಿಗೆ ಕಾರಣವಾಗಿದ್ದ ಪುಲ್ವಾಮ ಭಯೋತ್ಪಾದಕ ದಾಳಿಯ ಬಳಿಕ, ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಸಂಭ್ರಮ ಪಟ್ಟಿದ್ದಾರೆನ್ನಲಾದ ವಾಟ್ಸಪ್ ಚಾಟ್ ಸೋರಿಕೆಯಾಗಿರುವ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅರ್ನಾಬ್ ಗೋಸ್ವಾಮಿ ಮತ್ತು ಅವರ ಬೆಂಬಲಿಸುವ ಬಿಜೆಪಿ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಅಸಂಖ್ಯಾತ ಜನರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ @AntiNationalBJPArnab (ದೇಶವಿರೋಧಿ ಬಿಜೆಪಿ ಅರ್ನಾಬ್) #AntiNationalArnab (ದೇಶವಿರೋಧಿ ಅರ್ನಾಬ್) ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟಾಪ್ ಟ್ರೆಂಡಿಂಗ್ ನಲ್ಲಿದೆ.

- Advertisement -

ಅಸಂಖ್ಯಾತ ಜನರು ಈ ಹ್ಯಾಶ್ ಟ್ಯಾಗ್ ಬಳಸಿ, ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದು, ಅರ್ನಾಬ್ ಗೋಸ್ವಾಮಿ ದೇಶವಿರೋಧಿ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸುತ್ತಿದ್ದಾರೆ.

ಅರ್ನಾಬ್ ಗೋಸ್ವಾಮಿ ಮತ್ತು ಬಾರ್ಕ್ ಮಾಜಿ ಅಧ್ಯಕ್ಷ ಪಾರ್ಥೊ ದಾಸ್ ಗುಪ್ತಾ ನಡುವಿನ ವಾಟ್ಸಪ್ ಚಾಟ್ ಸಂದೇಶ ಲೀಕ್ ಆಗಿದ್ದು, ಆ ಚಾಟ್ ಗಳಲ್ಲಿ ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ 500 ಪುಟಗಳಷ್ಟು ಪಾರ್ಥೋ ದಾಸ್ ಗುಪ್ತಾ ಮತ್ತು ಅರ್ನಾಬ್ ನಡುವೆ ನಡೆದಿದೆ ಎನ್ನಲಾದ ವಾಟ್ಸಪ್ ಚಾಟ್ ವಿವರಗಳಿವೆ ಎನ್ನಲಾಗಿದ್ದು, ಅದು ಇದೀಗ ಸೋರಿಕೆಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

- Advertisement -

“ಅರ್ನಾಬ್ ಯಾರು, ಪುಲ್ವಾಮ ಯಾಕೆ ಸಂಭವಿಸಿತು, ಬಾಲಕೋಟ್ ಅನ್ನು ಹೇಗೆ ಯೋಜಿಸಿದ್ದಾರೆ, ಸಾಮಾಜಿಕ ಕಾರ್ಯಕರ್ತರನ್ನು ಯಾರು ಬೆದರಿಸುತ್ತಾರೆ, ರಾಷ್ಟ್ರೀಯತೆಯ ಹಿಂದೆ ಏನಿದೆ, ಬಿಜೆಪಿ ಸತ್ಯಗಳನ್ನು ಹೇಗೆ ತಿರುಚುತ್ತದೆ, ನಿಜವಾದ ರಾಷ್ಟ್ರ ವಿರೋಧಿ ಯಾರು ಎಂಬುದು ರಾಷ್ಟ್ರಕ್ಕೆ ಈಗ ತಿಳಿಯಿತು” ಎಂದು ಮಾನವ ಹಕ್ಕು ಹೋರಾಟಗಾರ ತಿರುಮುರುಗನ್ ಗಾಂಧಿ ಟ್ವೀಟ್ ಮಾಡಿದ್ದಾರೆ.

“ಕೇವಲ ಭಯೋತ್ಪಾದಕರಷ್ಟೇ ಸೈನಿಕರ ಸಾವನ್ನು ಸಂಭ್ರಮಿಸುತ್ತಾರೆ” ಎಂದು ವಿನಯ್ ಕುಮಾರ್ ಎಂಬವರು ಟ್ವೀಟ್ ಮಾಡಿದ್ದಾರೆ.

“ದೇಶವಿರೋಧಿ ಅರ್ನಾಬ್, ಕೊಳಕು ನಾವಿಕಾ, ಪ್ರಯೋಜನಕ್ಕೆ ಬಾರದ ಪ್ರಕಾಶ್ ಜಾವ್ಡೇಕರ್, ಮೂರ್ಖ ರಜತ್ ಶರ್ಮಾ ಮುಂತಾದವರನ್ನು ಸೈನಿಕ ರಹಸ್ಯವನ್ನು ತಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್ ಸಮಿತಿಯನ್ನು ಮುಖ್ಯನ್ಯಾಯಮೂರ್ತಿ ಬೋಬ್ಡೆಯವರು ತಕ್ಷಣ ನೇಮಿಸಬೇಕು” ಎಂದು ಸಾಮಾಜಿಕ ಕಾರ್ಯಕರ್ತ ಶ್ರೀವತ್ಸ ವ್ಯಂಗ್ಯವಾಡಿದ್ದಾರೆ.   



Join Whatsapp