ಬೀಜಿಂಗ್: ಚೀನಾದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಸರ್ಕಾರ ಹೇರಿರುವ ಕಠಿಣ ಲಾಕ್ ಡೌನ್ ವಿರೋಧಿಸಿ ಜನತೆ ದಂಗೆ ಎದ್ದಿದ್ದಾರೆ.
ಭಾನುವಾರ ಒಂದೇ ದಿನ ಸೋಂಕಿನ 40,000 ಹೊಸ ಪ್ರಕರಣಗಳು ದಾಖಲಾಗಿವೆ. ಸೋಂಕು ಶೂನ್ಯಕ್ಕಿಳಿಸಲು ಅಧ್ಯಕ್ಷ ಷಿ ಜಿನ್‌ಪಿಂಗ್ ನೇತೃತ್ವದ ಸರ್ಕಾರ ಕಠಿಣ ಲಾಕ್ ಡೌನ್ ಹೇರಿರುವುದರ ವಿರುದ್ಧ ಜನತೆ ದಂಗೆ ಎದ್ದಿರುವುದಾಗಿ ವರದಿಯಾಗಿದೆ.
ಆಡಳಿತಾರೂಢ ಚೀನಾ ಕಮ್ಯುನಿಸ್ಟ್ ಪಕ್ಷ (ಸಿಪಿಸಿ) ಮತ್ತು ಷಿ ಜಿನ್‌ಪಿಂಗ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಭಾರಿ ಸಂಖ್ಯೆಯಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ. ಹಲವು ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿದ್ದಾರೆ.