ಬೆಂಗಳೂರು: ತೈಲ ಬೆಲೆ, ವಿದ್ಯತ್ ದರ ಏರಿಕೆಯ ಬೆನ್ನಲ್ಲೇ ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್ ಕಾದಿದೆ.
ನಂದಿನಿ ಹಾಲಿನ ದರ ಲೀಟರ್ ಗೆ 5 ರೂ ಹೆಚ್ಚಿಸುವಂತೆ ರಾಜ್ಯದ 14 ಹಾಲಿನ ಒಕ್ಕೂಟಗಳು ಕೆಎಂಎಫ್ ಗೆ ಮನವಿ ಸಲ್ಲಿಸಿವೆ. ಶೀಘ್ರದಲ್ಲೇ ಸಿಎಂ ಭೇಟಿಗೂ ನಿರ್ಧರಿಸಿವೆ. ಇದರಿಂದ ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆ ಸಾಧ್ಯತೆ ಇದೆ.
2020 ರಲ್ಲಿ ಲೀಟರ್ ಹಾಲಿಗೆ ಕೇವಲ 2 ರೂ ಏರಿಕೆ ಮಾಡಲಾಗಿತ್ತು. ರೈತರು ಕಷ್ಟದಲ್ಲಿದ್ದಾರೆ, ಹಾಲು ಒಕ್ಕೂಟಗಳು ನಷ್ಟದಲ್ಲಿವೆ. ಹಾಗಾಗಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಒಕ್ಕೂಟಗಳು ತಿಳಿಸಿವೆ.