ಬೆಂಗಳೂರು: ಆಗಸ್ಟ್ ನಲ್ಲಿ ನಡೆದ ಸಿದ್ದರಾಮೋತ್ಸವ ಮತ್ತು ರಾಹುಲ್ ಗಾಂಧಿಯ ಭಾರತ ಜೋಡೋ ಯಾತ್ರೆಯಿಂದ ವಿಚಲಿತರಾಗಿರುವ ಕರ್ನಾಟಕ ಬಿಜೆಪಿ ಅಕ್ಟೋಬರ್ 30 ರಂದು ಕಲಬುರಗಿಯಲ್ಲಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಗಳ ಬೃಹತ್ ರ್ಯಾಲಿಯನ್ನು ಕಲಬುರುಗಿಯಲ್ಲಿ ಆಯೋಜಿಸಿದ್ದು, ಕಾರ್ಯಕ್ರಮಕ್ಕೆ ನರೇಂದ್ರ ಮೋದಿಗೂ ಆಹ್ವಾನ ನೀಡಲಾಗಿದೆ.
ವಿರಾಟ್ ಒಬಿಸಿ ಜಾಗೃತಿ ಸಮವೇಶ’ ಎಂದು ಹೆಸರಿಸಲಾದ ಈ ರ್ಯಾಲಿಯು ಮತ್ತೆ ಸಿದ್ದರಾಮೋತ್ಸವಕ್ಕೆ ಟಕ್ಕರ್ ಕೊಡುವ ಉದ್ದೇಶದಿಂದ ನಡೆಸಲಾಗುತ್ತಿದೆ ಎನ್ನಲಾಗಿದ್ದು ರಾಜ್ಯಕ್ಕೆ ಮತ್ತೆ ಮೋದಿ ಆಗಮನದ ನಿರೀಕ್ಷೆಯಿದೆ.
ಸಿದ್ದರಾಮೋತ್ಸವ ಮತ್ತು ಭಾರತ್ ಜೋಡೋ ಯಾತ್ರೆಯ ಜೊತೆಗೆ ಆಗಸ್ಟ್ 15 ರಂದು ಕಾಂಗ್ರೆಸ್ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಯಾತ್ರೆ ಮತ್ತು ಮಾರ್ಚ್ ನಲ್ಲಿ ನಡೆದ ಮೇಕೆದಾಟು ಪಾದಯಾತ್ರೆ ಹೀಗೆ ಎಲ್ಲವೂ ಯಶಸ್ವಿಯಾಗಿದೆ. ಇದರಿಂದ ಕಂಗೆಟ್ಟು ಹೋದ ಬಿಜೆಪಿ ಮೇಲಿಂದ ಮೇಲೆ ಸಮಾವೇಶ ಮಾಡಿ ಸೋಲುತ್ತಿದ್ದು, ಇದೀಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ.