ಮುರುಘಾ ಶ್ರೀ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲು

Prasthutha|

ಮೈಸೂರು: ಮುರುಘಾ ಶ್ರೀಗಳು ಸೇರಿದಂತೆ 7 ಜನರ ವಿರುದ್ಧ ಮತ್ತೊಂದು ಪೋಕ್ಸೋ ಪ್ರಕರಣ ದಾಖಲಾಗಿದೆ.

- Advertisement -

ಚಿತ್ರದುರ್ಗ ಮಠದ ವಸತಿ ಶಾಲೆಯ ಅಡುಗೆ ಸಹಾಯಕಿಯೊಬ್ಬರು ತಮ್ಮಿಬ್ಬರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ ಎಫ್​ ಐಆರ್ ದಾಖಲಿಸಿದ್ದಾರೆ.

ದೂರಿನಲ್ಲಿ ಮುರುಘಾ ಶ್ರೀಗಳು ಮೊದಲ ಆರೋಪಿ, ಎರಡನೇ ಆರೋಪಿಯಾಗಿ ವಾರ್ಡನ್ ರಶ್ಮಿ ಮತ್ತು ಕ್ರಮವಾಗಿ ಬಸವಾದಿತ್ಯ, ಪರಮಶಿವಯ್ಯ, ಗಂಗಾದರಯ್ಯ ಮತ್ತು ಸ್ವಾಮೀಜಿ ಸಹಾಯಕರಾದ ಮಾಲಿಂಗ ಮತ್ತು ಕರಿಬಸಪ್ಪ 6 ಮತ್ತು 7ನೇ ಆರೋಪಿ ಎಂದು ನಮೂದಿಸಲಾಗಿದೆ.

Join Whatsapp