ಭಾರತಕ್ಕೆ ಮತ್ತೊಂದು ಪದಕ: ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಸೆಹ್ರಾವತ್‌

Prasthutha|

ಪ್ಯಾರಿಸ್: ಭಾರತದ ಯುವ ಕುಸ್ತಿಪಟು ಅಮನ್ ಸೆಹ್ರಾವತ್ 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಪ್ಯಾರಿಸ್ ಕ್ರೀಡಾಕೂಟದ 14 ನೇ ದಿನದ ಕಂಚಿನ ಪದಕಕ್ಕಾಗಿ ಚಾಂಪ್ ಡಿ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಪೋರ್ಟೊ ರಿಕೊದ ಡೇರಿಯನ್ ಟೊಯಿ ಕ್ರೂಜ್ ಅವರನ್ನು ಸೋಲಿಸಿದ ಭಾರತದ ಅಮನ್ ಸೆಹ್ರಾವತ್ ಕುಸ್ತಿಯಲ್ಲಿ ಕಂಚಿನ ಪದಕವನ್ನು ಪಡೆದರು.

- Advertisement -

ಸೆಮಿಫೈನಲ್​ನಲ್ಲಿ ಜಪಾನ್‌ನ ಹಿಗುಚಿ ರೇ ವಿರುದ್ಧ 10-0 ಅಂತರದಿಂದ ಹೀನಾಯ ಸೋಲನುಭವಿಸಿದ 21 ವರ್ಷದ ಅಮನ್ ಸೆಹ್ರಾವತ್ 13-5 ಅಂತರದಲ್ಲಿ ಡೇರಿಯನ್ ಕ್ರೂಜ್ ಅವರನ್ನು ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಐದನೇ ಭಾರತೀಯ ಕುಸ್ತಿಪಟು ಎಂಬ ಹಾಗೂ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಎಂಟನೇ ಪದಕ ಗೆದ್ದುಕೊಟ್ಟ ಹೆಗ್ಗಳಿಕೆ ಅಮನ್ ಸೆಹ್ರಾವತ್ ಅವರ ಪಾಲಾಗಿದೆ.

ಪುರುಷರ 57 ಕೆ.ಜಿ. ಫ್ರೀಸ್ಟೈಲ್‌ ಕುಸ್ತಿ ಪಂದ್ಯದಲ್ಲಿ ಅಮನ್ ಸೆಹ್ರಾವತ್ ಈ ಸಾಧನೆ ಮಾಡಿದ್ದಾರೆ.



Join Whatsapp