ಉಡುಪಿಯ ಮತ್ತೊಂದು ಕಾಲೇಜಿನಲ್ಲಿ ಕಿರಿಕ್: ಕೇಸರಿ ಶಾಲು, ಪೇಟ ಧರಿಸಿ ನೃತ್ಯ ಮಾಡಿದ ವಿದ್ಯಾರ್ಥಿಗಳು

Prasthutha|

ಉಡುಪಿ: ಕೇಸರಿ ಶಾಲು, ಪೇಟ ಧರಿಸಿ ಬಂದ ವಿದ್ಯಾರ್ಥಿಗಳು ಇಂದು ಶಿರವಸ್ತ್ರ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರನ್ನು ಕಾಲೇಜು ಪ್ರವೇಶಿಸದಂತೆ ಪ್ರತಿಭಟನೆ ನಡೆಸಿದ್ದಾರೆ.

- Advertisement -

ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಈ ಕಾಲೇಜಿನಲ್ಲಿ ವಿದ್ಯಾರ್ಥಿನೀಯರು ಹಲವು ವರ್ಷದಿಂದ ಶಿರವಸ್ತ್ರ ಧರಿಸುತ್ತಿದ್ದರು. ಇದೀಗ ಅವರಿಗೆ ತಡೆಯೊಡ್ಡಲಾಗಿದೆ.

ಕಾಲೇಜು ಕ್ಯಾಂಪಸ್ ನಲ್ಲಿ ಬಿಗುವಿನ ವಾತಾವರಣವಿದ್ದು ಪೊಲೀಸರು ಭದ್ರತೆ ಕೈಗೊಂಡಿದ್ದಾರೆ. ಶಿರವಸ್ತ್ರ ಧರಿಸಿ ಬಂದ ವಿದ್ಯಾರ್ಥಿನಿಯರು ತರಗತಿ ಹಾಜರಾಗದೆ ಕ್ಯಾಂಪಸ್ ನಲ್ಲಿ ನಿಂತಿದ್ದಾರೆ.

- Advertisement -

ಈ ಮಧ್ಯೆ ಪಿಯುಸಿ ಕಾಲೇಜಿಗೆ ರಜೆ ಘೋಷಿಸಲಾಗಿದೆ.

Join Whatsapp