ಯುವತಿಯ ರುಂಡ ಕಡಿದು ಠಾಣೆಗೆ ತಂದಿದ್ದ ಆರೋಪಿ ವಿರುದ್ಧ ಮತ್ತೊಂದು ಪ್ರಕರಣ !

Prasthutha|

ವಿಜಯನಗರ: ಕೂಡ್ಲಿಗಿಯಲ್ಲಿ ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲು ಆಗದ ಕಾರಣಕ್ಕೆ ವಿಕೃತ ಪ್ರೇಮಿಯೊಬ್ಬ ಆಕೆಯ ತಲೆ ಕಡಿದುದಲ್ಲದೆ, ಆ ರುಂಡವನ್ನು ಕೈಯಲ್ಲಿ ಹಿಡಿದು ಪೊಲೀಸ್ ಠಾಣೆಗೆ ಬಂದ ಭೀಕರ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.

- Advertisement -

ಕೂಡ್ಲಿಗಿ ತಾಲೂಕಿನ ಕನ್ನಬೋರಯ್ಯಹಟ್ಟಿಯಲ್ಲಿ ನಡೆದ ಯುವತಿಯ ಕೊಲೆ ಪ್ರಕರಣದ ಆರೋಪಿ ಭೋಜರಾಜ್ 15 ವರ್ಷದ ಅಪ್ರಾಪ್ತೆಯನ್ನು ಮದುವೆ ಆಗಿರುವ ಆರೋಪ ಕೇಳಿಬಂದಿದೆ. ಹೀಗಾಗಿ ಆರೋಪಿ ವಿರುದ್ಧ ಬಾಲ್ಯ ವಿವಾಹ ಕಾಯ್ದೆ ಹಾಗೂ ಪೋಕ್ಸೊ ಅಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ತಂದೆ-ತಾಯಿ ಹಾಗೂ ಹುಡುಗಿಯ ತಂದೆ-ತಾಯಿ ವಿರುದ್ಧವೂ ಖಾನಾಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


ಅಪ್ರಾಪ್ತೆಯ ಹೇಳಿಕೆ ಆಧಾರದ ಮೇಲೆ ತನಿಖೆ ಮುಂದುವರೆಸುತ್ತೇವೆ ಎಂದು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಹೇಳಿದ್ದಾರೆ.

- Advertisement -


ನಿರ್ಮಲಾಳನ್ನು ಭೋಜರಾಜ ಪ್ರೀತಿಸುತ್ತಿದ್ದ. ನಿರ್ಮಲಾಳನ್ನು ಮದುವೆ ಮಾಡಿಕೊಂಡುವಂತೆ ಈ ಮೊದಲು ಆಕೆಯ ಪೋಷಕರಲ್ಲಿ ಈತ ಕೇಳಿದ್ದ. ಆದರೆ ಆಕೆಯ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಭೋಜರಾಜ ಬೇರೊಬ್ಬಳ ಜೊತೆ ಎರಡು ತಿಂಗಳ ಹಿಂದೆ ಮದುವೆಯಾಗಿದ್ದ. ಆದರೆ ನಿರ್ಮಲಾಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ. ಬೇರೊಂದು ಊರಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ನಿರ್ಮಲಾ, ಪರೀಕ್ಷೆಗಾಗಿ ಓದಲು ಊರಿಗೆ ಬಂದಿದ್ದಳು. ಇದೇ ಸಮಯಕ್ಕೆ ಕಾಯುತ್ತಿದ್ದ ಭೋಜರಾಜ, ಆಕೆಯ ತಲೆ ಕಡಿದು ರುಂಡದೊಂದಿಗೆ ಠಾಣೆಗೆ ಬಂದು ಶರಣಾಗಿದ್ದನು.



Join Whatsapp