ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ: ವಾರದಲ್ಲೇ ಇದು ನಾಲ್ಕನೇ ಘಟನೆ

Prasthutha|

ಪಾಟ್ನಾ: ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದಿದ್ದು, ಇಲ್ಲಿ ಒಂದೇ ವಾರದಲ್ಲಿ ನಾಲ್ಕು ಸೇತುವೆಗಳು ಒಂದರ ಹಿಂದೆ ಒಂದರಂತೆ ಕುಸಿದಿವೆ.

- Advertisement -


ಇಂದು (ಗುರುವಾರ) ಕಿಶನ್ ಗಂಜ್ ಜಿಲ್ಲೆಯಲ್ಲಿ ಸೇತುವೆ ಕುಸಿದಿದೆ. ಕಂಕೈ ನದಿಯ ಉಪನದಿಗೆ ನಿರ್ಮಿಸಲಾಗಿರುವ 70 ಮೀಟರ್ ಸೇತುವೆ, ಬಹದ್ದೂರ್ ಗಂಜ್ ಮತ್ತು ದಿಘಲ್‌ ಬ್ಯಾಂಕ್ ಬ್ಲಾಕ್ ಗಳನ್ನು ಸಂಪರ್ಕಿಸುತ್ತದೆ. ಈ ಸೇತುವೆ ಕುಸಿತವು ಎರಡು ಪಟ್ಟಣಗಳ ನಡುವಿನ ಸಂಪರ್ಕದ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ.


ಘಟನೆಯ ಬಗ್ಗೆ ಮಾಹಿತಿ ಪಡೆದ ಬಹದ್ದೂರ್ಗಂಜ್ ಪೊಲೀಸ್ ಠಾಣೆಯ ಮುಖ್ಯಸ್ಥ ಅಭಿನವ್ ಪರಾಸರ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ತಲುಪಿದ್ದು ತಕ್ಷಣವೇ ಎರಡೂ ತುದಿಗಳಲ್ಲಿ ಪ್ರದೇಶವನ್ನು ಬ್ಯಾರಿಕೇಡ್ ಮಾಡಿ ವಾಹನ ಸಂಚಾರವನ್ನು ನಿಲ್ಲಿಸಿದ್ದಾರೆ.

Join Whatsapp