ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ವಿರುದ್ಧ ತಮಿಳಿನ ನಟಿಯೊಬ್ಬರು ಗುರುತರ ಆರೋಪ ಮಾಡಿದ್ದಾರೆ.
ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಅಣ್ಣಾಮಲೈ ಕಳಪೆ ವ್ಯಕ್ತಿತ್ವದವನು ಆ ಕಾರಣದಿಂದಾಗಿಯೇ ನಾನು ಬಿಜೆಪಿಯನ್ನೂ ತೊರೆಯುತ್ತಿದ್ದೇನೆ ಅವರು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಎರಡು ದಿನಗಳ ಹಿಂದೆ ಟ್ವೀಟ್ ಕೂಡ ಮಾಡಿರುವ ನಟಿ, ಅಣ್ಣಾಮಲೈ ಅವರ ಮತ್ತೊಂದು ಮುಖವನ್ನು ಬಹಿರಂಗ ಪಡಿಸುವಂತಹ ವಿಡಿಯೋ ಮತ್ತು ಆಡಿಯೋ ನನ್ನ ಬಳಿ ಇವೆ. ಅವುಗಳನ್ನು ಪೊಲೀಸರಿಗೆ ನೀಡಲು ನಾನು ತಯಾರಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಸದ್ಯ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಅಣ್ಣಾಮಲೈ ತಮ್ಮದೇ ಆದ ರೀತಿಯ ಪಕ್ಷವನ್ನು ಕಟ್ಟಲು ಪಯತ್ನಿಸುತ್ತಿದ್ದು, ಮುಂದಿನ ಚುನಾವಣೆಗೆ ಭಾರೀ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದಾರೆ.
ಅಣ್ಣಾಮಲೈ ವಿರುದ್ಧ ದೂರು ನೀಡಲು ಸಿದ್ಧತೆ ಮಾಡಿಕೊಂಡಿರುವ ನಟಿ, ತಮ್ಮ ಬಳಿ ಇರುವ ಎಲ್ಲ ಸಾಕ್ಷಿಗಳನ್ನು ಪೊಲೀಸರ ಮುಂದೆ ಇಡುವುದಾಗಿಯೂ ತಿಳಿಸಿದ್ದು, ಈ ವಿಷಯದಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯದೇ ದೊಡ್ಡ ಮಟ್ಟದಲ್ಲೇ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.