ಬೆಂಗಳೂರು: ಹಿಂದಿನ ಸರ್ಕಾರದಲ್ಲಾದ ಲೋಪಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ. ಮನುಷ್ಯರ ಬುದ್ಧಿಮತ್ತೆಯು ಉದ್ಯೋಗವನ್ನು ಕಿತ್ತುಕೊಳ್ಳದಂತೆ ಕಾರ್ಯಯೋಜನೆ ರೂಪಿಸಬೇಕಿದೆ. ಸಮಾಜದಲ್ಲಿ ನಕಾರಾತ್ಮಕ ಧೋರಣೆ ಹೆಚ್ಚಾಗುತ್ತಿದೆ. ಇದೆಲ್ಲವನನ್ನೂ ನಾವು ಮೆಟ್ಟಿ ನಿಲ್ಲಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ನಗರದ ಮಾಣಿಕ್ ಶಾ ಪರೇಡ್ ನಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಅವರು, ಅನ್ನವನ್ನು ಕೊಡು, ಉಡಲು ಬಟ್ಟೆಯನ್ನು ಕೊಡು, ಮನೆಯನ್ನು ಕಟ್ಟಿಕೊಡು ಇರಲು ಎಂಬ ಮಾತಿನಂತೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಮಾಜಿ ಪ್ರಧಾನಿ ನೆಹರೂ ಅವರ ಆಶಯವನ್ನು ಪೂರೈಸಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಎಲ್ಲರ ಅಭಿವೃದ್ಧಿಯನ್ನು ಬಯಸುವುದೇ ರಾಜ್ಯ ಸರ್ಕಾರ ನೀತಿಯಾಗಿದೆ. ನಾಡಿನಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವುದಾಗಿದೆ. ಅನ್ನಬ್ರಹ್ಮ ರೈತರ ಅಭಿವೃದ್ಧಿಯಾಗಬೇಕಿದೆ. ಸುಭದ್ರ ಕರ್ನಾಟಕ, ಭಾರತವನ್ನು ನಿರ್ಮಿಸೋಣ. ನಮ್ಮ ಶಕ್ತಿಯಾದ ವೈವಿಧ್ಯತೆಯನ್ನು ಕಾಪಾಡಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದರು.