ರೊಚ್ಚಿಗೆದ್ದ ರೈತರು; ಸಿ.ಎಂ. ಪುತ್ಥಳಿಗೆ ರಕ್ತ ಸುರಿದು ಪ್ರತಿಭಟನೆ

Prasthutha|

ಮಂಡ್ಯ: ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕೆಂದು ಒತ್ತಾಯಿಸಿ ರೈತ ಸಂಘದ ಸದಸ್ಯರು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುತ್ಥಳಿ ಮೇಲೆ ತಮ್ಮ ರಕ್ತ ಸುರಿದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


30 ಮಂದಿ ರೈತ ಹೋರಾಟಗಾರರು ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು, ಕಾಂಕ್ರಿಟ್‌ನಿಂದ ತಯಾರಿಸಲ್ಪಟ್ಟ ಮುಖ್ಯಮಂತ್ರಿಯ ಪುತ್ಥಳಿ ಇಟ್ಟು ತಮ್ಮ ತಮ್ಮ ಕೈಗಳಿಂದ ಸಿರಿಂಜ್ ಮೂಲಕ ರಕ್ತ ತಗೆದು ಪುತ್ಥಳಿಗೆ ಸುರಿದರು. ‘ರೈತರಿಗೆ ಮೋಸ ಮಾಡಿದ ಮುಖ್ಯಮಂತ್ರಿಗೆ ರಕ್ತ ಕೊಡುತ್ತಿದ್ದೇವೆ. ಸಿಹಿ ಸುದ್ದಿ ಕೊಡುವುದಾಗಿ ಹೇಳಿ ಮಾತು ತಪ್ಪಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.


ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 53 ದಿನ ಪೂರೈಸಿದೆ, ಡಿ.30ರಂದು ಮನ್‌ಮುಲ್ ಆವರಣದಲ್ಲಿ ಮೆಗಾ ಡೇರಿಗೆ ಚಾಲನೆ ನೀಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬರಲಿರುವ ಹಿನ್ನೆಲೆಯಲ್ಲಿ, ಭದ್ರತೆ ಸಲುವಾಗಿ ರೈತರ ಧರಣಿ ಸ್ಥಳವನ್ನು ತೆರವುಗೊಳಿಸಿದ ಪೊಲೀಸರು, ಹೋರಾಟಗಾರರನ್ನು ಬಂಧಿಸಿ, ಶಾಮಿಯಾನ ಮತ್ತು ವೇದಿಕೆ ಕಿತ್ತು ಹಾಕಿದರು.



Join Whatsapp