ಚಿಕ್ಕಮಗಳೂರು: ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಆಲ್ದೂರು ಪಟ್ಟಣ ಸಮೀಪದ ಸಂತೆ ಮೈದಾನ ವಾರ್ಡ್ನಲ್ಲಿರುವ ಅಂಗನವಾಡಿ ಕೇಂದ್ರದ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ.
ಕುಸಿಯುವ ಭೀತಿ ಎದುರಾಗಿರುವ ಕಾರಣ ಪಕ್ಕದ ಸರ್ಕಾರಿ ಶಾಲೆಯ ನಲಿ ಕಲಿ ಕಟ್ಟಡದಲ್ಲಿ ಅಂಗನವಾಡಿ ನಡೆಸಲಾಗುತ್ತಿದ್ದು, 28 ಮಕ್ಕಳು ಬರುತ್ತಿದ್ದಾರೆ.
‘ಅಂಗನವಾಡಿ ಕಟ್ಟಡದ ಸುತ್ತ ಪೊದೆಗಳು ಬೆಳೆದಿದ್ದು, ಕಟ್ಟಡ ಕುಸಿಯುವ ಭೀತಿ ಇರುವುದರಿಂದ ಮಕ್ಕಳನ್ನು ಕಳುಹಿಸಲು ಭಯವಾಗುತ್ತದೆ. ಸಂಬಂಧಪಟ್ಟ ಇಲಾಖೆ ಕಟ್ಟಡ ತೆರವು ಮಾಡಿ ಹೊಸ ಕಟ್ಟಡ ನಿರ್ಮಿಸಬೇಕು’ ಎಂದು ಮಕ್ಕಳ ಪೋಷಕರು ಒತ್ತಾಯಿಸುತ್ತಿದ್ದಾರೆ.
ಈ ಬಗ್ಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಮಸ್ಯೆಗೆ ಶೀಘ್ರ ಪರಿಹಾರ ಕಲ್ಪಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.