ಯುಎಸ್’ಎಯಲ್ಲಿ ಓದುತ್ತಿರುವ ಆಂಧ್ರಪ್ರದೇಶದ ಯುವಕ ಗುಂಡಿಗೆ ಬಲಿ

Prasthutha|

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮಾಸ್ಟರ್ಸ್ ಡಿಗ್ರಿ ಮಾಡುತ್ತಿರುವ ಆಂಧ್ರಪ್ರದೇಶದ ಯುವಕನನ್ನು ಓಹಿಯೋ ಪ್ರಾಂತ್ಯದಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
24ರ ಪ್ರಾಯದ ಸೈಯೇಸ್ ವೀರ ಹತ್ಯೆಗೀಡಾದ ಯುವಕ. ಈ ಘಟನೆ ಕೊಲಂಬಸ್ ವಿಭಾಗದಲ್ಲಿ ನಡೆದಿದೆ.

- Advertisement -


ಏಪ್ರಿಲ್ 20ರ 12.50ಕ್ಕೆ ಕೊಲಂಬಸ್ ಪೊಲೀಸರು ಸ್ಥಳಕ್ಕೆ ಹೋದಾಗ ಗುರುತಿನ ಚೀಟಿ ಹೊಂದಿದ್ದ ಯುವಕ ಗುಂಡೇಟಿಗೆ ಬಲಿಯಾಗಿದ್ದುದು ಪತ್ತೆಯಾಯಿತು. ಕೂಡಲೆ ಅಗ್ನಿಶಾಮಕ ದಳದವರೂ ಸ್ಥಳಕ್ಕೆ ಧಾವಿಸಿದರು. ತುಸು ಮಿಸುಕಾಡುತ್ತಿದ್ದಂತೆ ಇದ್ದುದರಿಂದ ಕೂಡಲೆ ಆತನನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ 1.27ಕ್ಕೆ ಯುವಕ ಮೃತನಾಗಿರುವುದಾಗಿ ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ವೆಸ್ಟ್ ಬ್ರಾಡ್ ರಸ್ತೆಯ 1000ನೇ ಬ್ಲಾಕ್ ನಲ್ಲಿದ್ದ ಗ್ಯಾಸ್ ಸ್ಟೇಷನ್ ನಲ್ಲಿ ಈ ಕೊಲೆ ನಡೆದಿದೆ.


ಎಚ್- 1ಬಿ ವೀಸಾದಡಿ ಓದುತ್ತಿರುವ ಈ ಯುವಕ ಪದವಿ ಪಡೆಯಲು ಇನ್ನು 10 ದಿನಗಳಷ್ಟೆ ಬಾಕಿ ಇದ್ದವು. ಮೃತದೇಹವನ್ನು ಭಾರತಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗಿದೆ.
ಕಲಿಯುವಾಗ ಅನಿಲ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಪಾರ್ಟ್ ಟೈಂ ಕೆಲಸಕ್ಕೆ ಮಾಡಿ ತನ್ನ ಖರ್ಚನ್ನು ನೋಡಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.



Join Whatsapp