ಚೆರುಕ್ವಾಡಾ: ಕಾರು ಅಪಘಾತ ಸಂಭವಿಸಿ ಆಂಧ್ರ ವಿಧಾನ ಪರಿಷತ್ ಸದಸ್ಯ ಶೇಖ್ ಸಾಬ್ಜಿ (57) ಅವರು ನಿಧನರಾಗಿದ್ದಾರೆ.
ಭೀಮಾವರಮ್ ನಿಂದ ಎಲ್ಲೂರು ಕಡೆ ಸಾಬ್ಜಿ ಪ್ರಯಾಣಿಸುತ್ತಿದ್ದರು. ಮಧ್ಯಾಹ್ನ 12.30ರ ಹೊತ್ತಿಗೆ ಗೋದಾವರಿ ಜಿಲ್ಲೆಯ ಚೆರುಕ್ವಾಡಾ ಗ್ರಾಮದ ಬಳಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಎದುರಿನಿಂದ ಬರುತ್ತಿದ್ದ ಕಾರು ಅಡ್ಡಾದಿಡ್ಡಿಯಾಗಿ ಚಲಿಸುತ್ತಿತ್ತು. ಅಪಘಾತದಲ್ಲಿ ಸಾಬ್ಜಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿಕ್ಷಕರಾಗಿದ್ದ ಸಾಬ್ಜಿ ಅವರು ಶಿಕ್ಷಕರ ಕ್ಷೇತ್ರದಿಂದ ಗೆಲುವು ದಾಖಲಿಸಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಇವರ ಅವಧಿ 2027ರವರೆಗೂ ಇತ್ತು.