ಆಂಧ್ರದಲ್ಲಿ ಪ್ರವಾಹ: ರಾಷ್ಟ್ರೀಯ ವಿಪತ್ತು ಘೋಷಿಸಲು ಸಿಎಂ ನಾಯ್ಡು ಆಗ್ರಹ

Prasthutha|

ಅಮರಾವತಿ: ಮಳೆಯಿಂದಾಗಿ ಆಂಧ್ರಪ್ರದೇಶದಲ್ಲಿ ಉಂಟಾದ ಪ್ರವಾಹ ಸ್ಥಿತಿಯು ತಮ್ಮ ರಾಜಕೀಯ ಜೀವನದಲ್ಲಿ ಕಂಡ ದೊಡ್ಡ ದುರಂತ ಎಂದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡ, ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಕೇಂದ್ರವನ್ನು ಆಗ್ರಹಿಸಿದ್ದಾರೆ.

- Advertisement -


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ವಿಜಯವಾಡದಲ್ಲಿ ಮಳೆಯಿಂದಾಗಿ ಅಪಾರ ಹಾನಿಯಾಗಿದೆ. ಈವರೆಗೆ ಮಳೆ ಸಂಬಂಧಿತ ಅವಘಡಗಳಿಂದ ಕನಿಷ್ಠ 17 ಮಂದಿ ಮೃತಪಟ್ಟಿದ್ದಾರೆ. ನನ್ನ ವೃತ್ತಿಜೀವನದಲ್ಲಿ, ಇದು ಅತಿದೊಡ್ಡ ವಿಪತ್ತು, ನಾವು ಹುದುದ್ ಚಂಡಮಾರುತ ಮತ್ತು ತಿತ್ಲಿ ಚಂಡಮಾರುತದಂತಹ ಕೆಲವು ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಆದರೆ ಇವುಗಳಿಗೆ ಹೋಲಿಸಿದರೆ, ಇಲ್ಲಿ ಜನರ ನೋವು ಮತ್ತು ಆಸ್ತಿ ನಷ್ಟವು ದೊಡ್ಡದಾಗಿದೆ’ ಎಂದು ತಿಳಿಸಿದ್ದಾರೆ.


ವಿಪತ್ತಿಗೆ ಸಂಬಂಧಿಸಿದ ಎಲ್ಲಾ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು. ನಷ್ಟದಿಂದ ಚೇತರಿಸಿಕೊಳ್ಳಲು ರಾಜ್ಯಕ್ಕೆ ಆರ್ಥಿಕ ಸಹಾಯ ನೀಡುವಂತೆ ಮನವಿ ಮಾಡುವುದಾಗಿ ನಾಯ್ಡು ಹೇಳಿದ್ದಾರೆ.



Join Whatsapp