ಆಂಧ್ರಪ್ರದೇಶ ಸಿಎಂ ಸಹೋದರಿ ಶರ್ಮಿಳಾ ರೆಡ್ಡಿ ಪೊಲೀಸ್ ವಶ

Prasthutha|

ಆಂಧ್ರಪ್ರದೇಶ: ಸಿಎಂ ವೈ.ಎಸ್‌ ಜಗನ್‌ ಮೋಹನ್‌ ರೆಡ್ಡಿ ಸರ್ಕಾರದ ವಿರುದ್ಧ ಸೆಕ್ರೆಟರಿಯೇಟ್‌ ಚಲೋ ನಡೆಸುತ್ತಿದ್ದ ಸಿಎಂ ಸಹೋದರಿ ವೈ.ಎಸ್‌. ಶರ್ಮಿಳಾ ರೆಡ್ಡಿ ಅವರನ್ನು ವಿಜಯವಾಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರ ಜೊತೆಗೆ ಎಪಿಸಿಸಿ ಮುಖ್ಯಸ್ಥ ಜಿ ರುದ್ರರಾಜು ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

- Advertisement -

ರಾಜ್ಯದ ನಿರುದ್ಯೋಗಿ ಯುವಕರ ಸಮಸ್ಯೆಗಳನ್ನು ಪರಿಹರಿಸುವಂತೆ ಆಂಧ್ರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಕ್ಷೆ ವೈ.ಎಸ್ ಶರ್ಮಿಳಾ ಶರ್ಮಿಳಾ ರೆಡ್ಡಿ ಗುರುವಾರ ಬೆಳಗ್ಗೆ ವಿಜಯವಾಡದಲ್ಲಿ ಚಲೋ ಸೆಕ್ರೆಟರಿಯೇಟ್ ಪ್ರತಿಭಟನಾ ಮೆರವಣಿಗೆ ಆರಂಭಿಸಿದ್ದರು.

ಮೆರವಣಿಗೆ ನಗರದ ಏಲೂರು ರಸ್ತೆಗೆ ಬರುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ.

- Advertisement -

ಈ ವೇಳೆ ಸುಮಾರು ಎರಡು ಗಂಟೆಗಳ ಕಾಲ ಶರ್ಮಿಳಾ ಮತ್ತು ಅವರ ಬೆಂಬಲಿಗರು ರಸ್ತೆಯಲ್ಲೇ ನಿಲ್ಲಬೇಕಾಯಿತು. ಈ ಬೆನ್ನಲ್ಲೇ ಮಹಿಳಾ ಪೇದೆಗಳು ಶರ್ಮಿಳಾ ಅವರನ್ನು ಬಲವಂತವಾಗಿ ಎಳೆದೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದ್ದಾರೆ. ಈ ವೇಳೆ ಅವರ ಕೈಗಳಿಗೆ ಸ್ವಲ್ಪ ಗಾಯಗಳಾಗಿವೆ.

ಒಬ್ಬ ಮಹಿಳಾ ರಾಜಕಾರಣಿಯನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಖಂಡನೀಯ. ನಾನು ರಾಜಶೇಖರ ರೆಡ್ಡಿ ಅವರ ಮಗಳು, ಹೆದರುವವಳಲ್ಲ. ನನ್ನ ಹೋರಾಟ ಮುಂದುವರಿಸುತ್ತೇನೆ ಎಂದು ಶರ್ಮಿಳಾ ರೆಡ್ಡಿ ತಿಳಿಸಿದ್ದಾರೆ.

Join Whatsapp