ಜಾತಿ ಆಧಾರಿತ ಸಮೀಕ್ಷೆಗೆ ಅನುಮೋದನೆ ನೀಡಿದ ಆಂಧ್ರ ಪ್ರದೇಶ ಕ್ಯಾಬಿನೆಟ್

Prasthutha|

ಹೈದರಾಬಾದ್: ಜಾತಿ ಆಧಾರಿತ ಸಮೀಕ್ಷೆ‌ ನಡೆಸಲು ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಂಧ್ರಪ್ರದೇಶ ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ತುಳಿತಕ್ಕೊಳಗಾದ ವರ್ಗಗಳಿಗೆ ಸೇರಿದ ಜನರ ನಿಖರ ಸಂಖ್ಯೆಯನ್ನು ಗುರುತಿಸಲು ಅವರಿಗೆ ಸಾಮಾಜಿಕ-ಆರ್ಥಿಕ ಪ್ರಯೋಜನಗಳನ್ನು ವಿಸ್ತರಿಸಲು ಸಮಗ್ರ ಜಾತಿ ಆಧಾರಿತ ಸಮೀಕ್ಷೆಯನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಧಾರ ಮಾಡಿದೆ.

- Advertisement -

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ. ಶ್ರೀನಿವಾಸ ವೇಣುಗೋಪಾಲ ಕೃಷ್ಣ, ರಾಜ್ಯಾದ್ಯಂತ ಜಾತಿವಾರು ಸಮೀಕ್ಷೆ ನಡೆಸುವ ಅಗತ್ಯತೆಯ ಬಗ್ಗೆ ಸಂಪುಟವು ಕೂಲಂಕಷವಾಗಿ ಚರ್ಚಿಸಿದ ಬಳಿಕ ಪ್ರಸ್ತಾವನೆಯನ್ನು ಅನುಮೋದಿಸಲಾಯಿತು ಎಂದು ತಿಳಿಸಿದ್ದಾರೆ.

ಇಂತಹ ಸಮಗ್ರ ಜಾತಿ ಸಮೀಕ್ಷೆಯು ಶೋಷಿತ ವರ್ಗಗಳ ಜೀವನವನ್ನು ನಿವಾರಿಸಲು ಮತ್ತು ಅವರ ಸಾಮಾಜಿಕ ಸಬಲೀಕರಣವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

- Advertisement -

ಇದರಿಂದ ಸರ್ಕಾರವು ತನ್ನ ಕಲ್ಯಾಣ ಯೋಜನೆಗಳು ಮತ್ತು ಇತರ ಆರ್ಥಿಕ ಪ್ರಯೋಜನಗಳನ್ನು ವಿಸ್ತರಿಸಬಹುದು ಎಂದು ವೇಣುಗೋಪಾಲ ಕೃಷ್ಣ ಹೇಳಿದ್ದಾರೆ.



Join Whatsapp