ಮತ್ತೆ ನಾಲಿಗೆ ಹರಿಬಿಟ್ಟ ಅನಂತಕುಮಾರ್ ಹೆಗಡೆ: ನಟ ಅಮೀರ್ ಖಾನ್ ಜಾಹೀರಾತು ಬಗ್ಗೆ ಕಿಡಿ

Prasthutha|

ಶಿರಸಿ: ಖಾಸಗಿ ಟೈರ್ ಕಂಪನಿಯೊಂದರ ಜಾಹೀರಾತಿನಲ್ಲಿ ಅಭಿನಯಿಸಿರುವ ಅಮೀರ್ ಖಾನ್ ಅವರು ಹಿಂದು ಧರ್ಮದ ಆಚರಣೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ  ಸಂಸದ ಅನಂತಕುಮಾರ್ ಹೆಗಡೆ, ಅಮೀರ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಾಹೀರಾತಿನಲ್ಲಿ “ನಮ್ಮ ಕ್ರಿಕೆಟ್ ಟೀಮ್ ಇಂದು ಗೆದ್ದರೆ ನಾವು ಜೋರಾಗಿ ಪಟಾಕಿ ಹೊಡೆಯೋಣ, ಆದರೆ ನಮ್ಮ ಅಪಾರ್ಟ್‌ಮೆಂಟ್ ಕಾಂಪೌಂಡ್‌ ನ ಒಳಗೆ, ರಸ್ತೆಯಲ್ಲಲ್ಲ” ಎನ್ನುವ ಜಾಹೀರಾತಿನಲ್ಲಿ ಅಮೀರ್ ಖಾನ್ ಹೇಳಿದ್ದರು ಈ ಬಗ್ಗೆ  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅನಂತಕುಮಾರ್ ಹೆಗಡೆ, ದೀಪಾವಳಿ ಹಬ್ಬದಲ್ಲಿ ಹಿಂದೂಗಳಿಗೆ ಪಟಾಕಿ ಸಿಡಿಸದಂತೆ ಅಮಿರ್ ಖಾನ್ ಮನವಿ ಮಾಡಿದ್ದಾನೆ. ಅವರ ಪರಿಸರ ಹಾಗೂ ಪ್ರಾಣಿಗಳ ಬಗ್ಗೆ ತೋರುತ್ತಿರುವ ಕಾಳಜಿಗೆ ನನ್ನ ಮೆಚ್ಚುಗೆ ಇದೆ ಎಂದು ಹೇಳಿದ್ದಾರೆ. ಅದರಂತೆ ಅನ್ಯಧರ್ಮಗಳಲ್ಲಿ ( ತಾನು ಪ್ರತಿಪಾದಿಸುವ ಧರ್ಮವನ್ನು ಹಿಡಿದು ) ನಡೆಯುವ ಎಷ್ಟೋ ಆಚರಣೆಗಳ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಹಿಂದೂಗಳ ಆಚರಣೆಯನ್ನು ಹೀಯಾಳಿಸುವುದೊಂದೇ ಇವರ ಕೆಲಸವೇ? ಎಂದು ಅವರು ಪ್ರಶ್ನಿಸಿದ್ದಾರೆ.

ರಸ್ತೆಯಲ್ಲಿ ಪಟಾಕಿ ಸಿಡಿಸಿದರೆ ಸಂಚಾರಕ್ಕೆ ಸಮಸ್ಯೆ ಆಗುವುದಾದರೆ ವಿಶೇಷ ದಿನಗಳಲ್ಲಿ ರಸ್ತೆಯಲ್ಲೇ ನಮಾಜ್ ಮಾಡುವುದರಿಂದಲೂ ಓಡಾಟಕ್ಕೆ ತೊಂದರೆಯಾಗುತ್ತದೆ. ಪಟಾಕಿಯಿಂದ ಶಬ್ದ ಮಾಲಿನ್ಯ ಆಗುವುದಾದರೆ, ಪ್ರತಿದಿನ ಮುಂಜಾನೆ ಧ್ವನಿವರ್ಧಕದ ಮೂಲಕ ಆಜಾನ್ ಮಾಡುವುದರಿಂದಲೂ ಆಗುತ್ತದೆ. ಈ ಕೂಡಲೇ ಈ ಜಾಹೀರಾತನ್ನು ಹಿಂಪಡೆಯಬೇಕೆಂದು ಸಿಯೆಟ್ ಸಂಸ್ಥೆಯ ಮಾಲೀಕ ಅನಂತ ವರಧಾನ್ ಗೋಯೆಂಕ ಅವರಿಗೆ ಅನಂತ ಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.



Join Whatsapp