ಅನಂತ ಕುಮಾರ್ ಒಬ್ಬ ಹುಚ್ಚ: ಆಂಜನೇಯ

Prasthutha|

ಚಿತ್ರದುರ್ಗ: ಅನಂತ ಕುಮಾರ್ ಹೆಗಡೆ ಒಬ್ಬ ಹುಚ್ಚ. ಹುಚ್ಚರ ಬಗ್ಗೆ ಯಾರಾದರೂ ಮಾತನಾಡುತ್ತಾರಾ? ಅವನ ಬಗ್ಗೆ ಮಾತನಾಡುವುದಿಲ್ಲ. ಮಾತಾಡಿದರೆ ಅವನನ್ನು ದೊಡ್ಡವರನ್ನಾಗಿಸುದಂತೆ ಆಗುತ್ತದೆ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಕಿಡಿಗಾರಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನು ಬೆಳೆದ ಹಿನ್ನೆಲೆ ಸಂಸ್ಕೃತಿ ಅದೇ ರೀತಿ ಇರಬೇಕು. ಹೀಗಾಗಿ ಅವನು ಆ ರೀತಿ ವರ್ತನೆ ಮಾಡುತ್ತಾನೆ. ನಾವು ಆ ರೀತಿ ಅಲ್ಲ, ನಾನು ಸಹ ಏಕವಚನ ಬಳಸಬಾರದು. ಆದರೆ ಅವನಿಗೆ ಯಾವ ಭಾಷೆ ಬಳಸಿದರೂ ಕೂಡ ಸಾಲದು. ನಮ್ಮ ನಾಡಿನ ದೊರೆ ಮುಖ್ಯಮಂತ್ರಿ ಸಿದ್ಧರಾಮಯ್ಯ. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ಮಾತಾಡ್ತಾನಲ್ಲ, ಅವನು ಮನುಷ್ಯನಾ ಎಂದು ಅನಂತ ಕುಮಾರ್ ಹೆಗಡೆ ವಿರುದ್ಧ ಆಂಜನೇಯ ಆಕ್ರೋಶ ಹೊರಹಾಕಿದರು.



Join Whatsapp