ಆನಂದ್ ಸಿಂಗ್ -ಡಿಕೆ ಶಿವಕುಮಾರ್ ಮಾತುಕತೆ: ರಾಜಕೀಯದಲ್ಲಿ ಸಂಚಲನ

Prasthutha|

ಬೆಂಗಳೂರು: ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಇದು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಯ ಬಳಿಕ ಆನಂದ್ ಸಿಂಗ್ ಅವರು ತೀವ್ರ ಅಸಮಾಧಾನಗೊಂಡಿದ್ದರು. ಇದಾದ ಬಳಿಕ ಅವರು ಮುಖ್ಯಮಂತ್ರಿಯೊಂದಿಗೆ ಅಂತರ ಕಾಯ್ದುಕೊಂಡಿದ್ದರು. ಈ ಮಧ್ಯೆಯೆ ಡಿಕೆಶಿಯನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಈ ಭೇಟಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಆನಂದ್ ಸಿಂಗ್ ನನ್ನ ಮನೆಗೆ ಬಂದಿರುವುದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ನಾವು ರಾಜಕೀಯ ಮಾತನಾಡುವುದಿದ್ದರೆ ರೆಸಾರ್ಟ್ ಗಳಲ್ಲಿ, ಹೊಟೇಲ್ ಗಳಲ್ಲಿ ಮಾಡುತ್ತೇವೆ. ಮನೆಯಲ್ಲಿ ನೇರವಾಗಿ ಬಂದು ಅದೆಲ್ಲ ಮಾತನಾಡುವುದಿಲ್ಲ. ಆ ಕಾಮನ್ ಸೆನ್ಸ್ ನಮಗೂ ಇರಬೇಕು, ನಿಮಗೂ ಇರಬೇಕು ಎಂದರು.
ಕೇಂದ್ರ ಸರ್ಕಾರದ ಬಜೆಟ್ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಕೋವಿಡ್ ನಿಂದಾಗಿ ನರಳಿದ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡಬಹುದು ಎಂಬ ನಿರೀಕ್ಷೆಯಲ್ಲಿದ್ದೇವೆ. ರಾಜ್ಯದಲ್ಲಿ ಸಾವನ್ನಪ್ಪಿದ ನಾಲ್ಕು ಲಕ್ಷ ಜನರಿಗೆ ಸರ್ಕಾರ ಯಾವ ರೀತಿ ಸಹಾಯ ಮಾಡಬಹುದು. ಕೆಲವರಿಗೆ ಸೀಮಿತವಾಗಿ ಒಂದೊಂದು ಲಕ್ಷ ಕೊಡುವುದಕ್ಕೆ ಮುಂದಾಗಿತ್ತು. ನಾಲ್ಕು ಲಕ್ಷ ಕೊಡಬೇಕು ಎಂದು ನಾವು ಒತ್ತಾಯ ಮಾಡಿದ್ದೆವು.ನ್ಯಾಯಾಲಯವೂ ಹೇಳಿತ್ತು. ರೈತರಿಗೆ, ಕಾರ್ಮಿಕರಿಗೆ ನಷ್ಟವಾಗಿದೆ. ಅನೇಕ ಜನ ಕೆಲಸ ಕಳೆದುಕೊಂಡಿದ್ದಾರೆ. ಇವರೆಲ್ಲರ ಪಟ್ಟಿ ಸಿದ್ಧಪಡಿಸಿ, ಅವರಿಗೆ ಹಣ ಕೊಡಬಹುದು ಎಂಬ ನಂಬಿಕೆಯಿದೆ ಎಂದರು.



Join Whatsapp