ಬಾಲ್ಯದಿಂದಲೂ ಯುಎಸ್ಎಯಲ್ಲಿದ್ದ ಭಾರತೀಯ ಯುವತಿಗೆ ದೇಶ ಬಿಡಲು ಆದೇಶ

Prasthutha|

ವಾಷಿಂಗ್ಟನ್: ನಾಲ್ಕು ವರ್ಷ ಎಂಟು ತಿಂಗಳ ಬಾಲಕಿಯಿದ್ದಾಗಿನಿಂದಲೂ ಅವಳು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲೇ ಬೆಳೆದವಳು. ಈಗ ಯುಎಸ್ಎ ಕಾನೂನು ಪಾಲಕರು ಆಕೆಗೆ ದೇಶ ಬಿಡಲು ಹೇಳಿದ್ದಾರೆ.

- Advertisement -

ಈ ಡಾಕ್ಯುಮೆಂಟೆಡ್ ಡ್ರೀಮರ್ ಗಳು ಎಂದರೆ ವಲಸೆ ಕಾಗದ ಪತ್ರಗಳನ್ನು ಹೊಂದಿಲ್ಲದವರು.ಈ ಡಾಕ್ಯುಮೆಂಟೆಡ್ ಡ್ರೀಮರ್ ಗಳು ಹೆತ್ತವರೊಂದಿಗೆ ಪುಟ್ಟ ಮಕ್ಕಳಾಗಿ ಅಮೆರಿಕ ಪ್ರವೇಶಿಸುತ್ತಾರೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭಾರತದ 5,00,000 ಸಹಿತ 1.1 ಕೋಟಿ ಜನ ‘ಕನಸಿನ ದಾಖಲೆ’ಯವರು ಇದ್ದಾರೆ ಎಂದು ತಿಳಿದು ಬಂದಿದೆ.

ಬೈಡನ್ ಬರುವಾಗ ಈ ಸಮಸ್ಯೆ ಪರಿಹರಿಸುವುದಾಗಿ ಹೇಳಿದ್ದು, ಮೂಲೆಗೆ ಬಿದ್ದಿದೆ. “20 ವರುಷದಿಂದ ನಾನು ಇದ್ದ ಮನೆಯನ್ನು, ನನ್ನ ಒಬ್ಬಂಟಿ ಬಂಧು ತಾಯಿಯನ್ನು ಬಿಟ್ಟು ಹೋಗುವಂತೆ ಹೇಳಲಾಗಿದೆ” ಎಂದು 23ರ ಅತುಲ್ಯ ರಾಜಕುಮಾರ್ ಹೇಳುತ್ತಾರೆ. ಅವರು ಈಗ ತಾನೇ ಟೆಕ್ಸಾಸ್ ಯುನಿವರ್ಸಿಟಿಯಲ್ಲಿ ಪದವಿ ಮುಗಿಸಿದ್ದಾರೆ.  

- Advertisement -

ಸೆನೆಟ್ ನಲ್ಲಿ ಚರ್ಚೆಗೆ ಬಂದಂತೆ ಪ್ರತಿ ವರುಷ 5,000 ಕನಸಿನ ದಾಖಲೆಯವರು ಈ ದೇಶ ಬಿಡಿ ಪರಿಸ್ಥಿತಿಗೆ ಒಳಗಾಗುತ್ತಾರೆ.

ಕಳೆದ ಕೊರೋನಾದ ನಡುವೆ ನರ್ಸಿಂಗ್ ಪದವೀಧರೆ  ಐರಿನ್ ರನ್ನು, ಎರಡು ತಿಂಗಳ ಹಿಂದೆ  ದೇಶ ಬಿಡುವಂತೆ ಹೇಳಲಾಯಿತು. ಆಕೆ ಮಗುವಾಗಿದ್ದಾಗಿನಿಂದಲೂ ಅಮೆರಿಕದಲ್ಲೆ ಬೆಳೆದವಳು.

ವಾಷಿಂಗ್ಟನ್ ನಲ್ಲಿ ಪತ್ರಕರ್ತರಾಗಿರುವ ರಾಜಶೇಖರ್ ಅವರು ತಮ್ಮ ಕುಟುಂಬವು ವಲಸೆ ತಾಪತ್ರಯದಲ್ಲಿ ಬಳಲುತ್ತಿರುವುದನ್ನು ಹೇಳಿದರು. ಈ ತಾಪತ್ರಯದಲ್ಲೆ ನನ್ನ ಸಹೋದರ ಮೃತನಾದ ಎನ್ನುತ್ತಾರೆ ಅವರು.

ಸೆನೆಟರ್ ಅಲೆಕ್ಸ್ ಪಡಿಲ್ಲಾ “ಇದು ಸಾಮಾಜಿಕ ಸಮಸ್ಯೆ. ಸೌಹಾರ್ದ ರೀತಿಯಲ್ಲಿ ಪರಿಹರಿಸಲು, ಕಾಂಗ್ರೆಸ್ ಮೂಲಕ ಅವರನ್ನೆಲ್ಲ ಕಲೆ ಹಾಕಿ ಪ್ರಯತ್ನ ನಡೆಸಿದ್ದೇನೆ” ಎನ್ನುತ್ತಾರೆ.

ಪಡಿಲ್ಲಾ ಪ್ರಕಾರ ಸದ್ಯ 14 ಲಕ್ಷ ಜನರು ನೌಕರಿ ಸಂಬಂಧದ ವೀಸಾ ಪಡೆಯಲು ಅರ್ಹರಿದ್ದಾರೆ.

ಪ್ರತಿ ವರುಷ 1,40,000 ಜನರಿಗೆ ಮಾತ್ರ ವೀಸಾ ಕೊಡಲು ಈಗ ಅವಕಾಶವಿದ್ದು ಅದರಲ್ಲಿ 70,000 ವೀಸಾಗಳು ಅರ್ಹ ನೌಕರರಿಗೆ ದೊರೆಯುತ್ತದೆ ಎಂದು ಅವರು ಹೇಳಿದರು.

ಸೆನೆಟರ್ ಜಾನ್ ಕಾರ್ನಿ ಪ್ರಕಾರ,  ಕೌಶಲಭರಿತ ನೌಕರರಿಗೆ ಆದ್ಯತೆಯ ಮೇಲೆ ವೀಸಾ ದೊರಕಬೇಕಾಗಿದೆ. 2030ರ ಹೊತ್ತಿಗೆ ಗ್ರೀನ್ ಕಾರ್ಡ್ ಬ್ಯಾಕ್ ಲಾಗ್ (ಹಿಂದಿನ ಆದ್ಯತೆಯದು) 20 ಲಕ್ಷ ಮೀರಲಿದೆ.

ಭಾರತ ಸರಕಾರ ಅನಿವಾಸಿ ಸಂಪಾದನೆ ನೋಡುತ್ತದೆಯೇ ಹೊರತು ಅವರ ಕಷ್ಟಕ್ಕಿಲ್ಲ ಎಂಬ ದೂರು ವ್ಯಾಪಕವಾಗಿದೆ.

Join Whatsapp