ವಾಷಿಂಗ್ಟನ್: ಪ್ರಯಾಣಿಕ ಬೋಟ್ ಮುಳುಗಿದ ಪರಿಣಾಮ ಭಾರತೀಯ ಕುಟುಂಬ ಸಾವನ್ನಪ್ಪಿದ ಘಟನೆ ನಡೆದಿದೆ.
ಅವರು ಪ್ರಯಾಣಿಸುತ್ತದ್ದ ಬೋಟು ಕಾಣೆಯಾಗಿದ್ದ ಅಕ್ವಾಸಾನೆ ಮೊಹವ್ಕ್ ಬುಡಕಟ್ಟು ಜನಾಂಗದ ಒಬ್ಬನಿಗೆ ಸೇರಿದ್ದು, ಮುಳುಗಿದ ಬೋಟಿನಲ್ಲಿ ಶವಗಳು ದೊರೆತಿರುವುದಾಗಿ ಉಪ ಪೋಲೀಸ್ ಮುಖ್ಯಸ್ಥ ಲೀ ಆನ್ ಓಬ್ರಿಯಾನ್ ಹೇಳಿದ್ದಾರೆ.
ಇದರಲ್ಲಿ ಸತ್ತ ಎರಡು ಕುಟುಂಬಗಳಲ್ಲಿ ಒಂದು ಭಾರತದ್ದಾದರೆ ಇನ್ನೊಂದು ರೊಮಾನಿಯಾದ್ದಾಗಿದೆ, ಅವರು ಕೆನಡಾ ಪಾಸ್ ಪೋರ್ಟ್ ಹೊಂದಿದ್ದರು. ಕೆನಡಾ ಯುಎಸ್ ಎ ಗಡಿಯ ಜವುಗು ಪ್ರದೇಶದಲ್ಲಿ ಬೋಟು ಮತ್ತು ಶವಗಳು ಸಿಕ್ಕಿವೆ.
ಎರಡು ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಒಬ್ಬರ ದೇಹ ತೇಲಿ ಬಂದಿದ್ದರೆ ಉಳಿದವರ ಮೃತದೇಹಗಳನ್ನು ಪೊಲೀಸರು ಕಾರ್ಯಾಚರಣೆ ನಡೆಸಿ ಮೇಲೆತ್ತಿದ್ದಾರೆ.
ಮೊಹವ್ಕ್ ಬುಡಕಟ್ಟು ಜನರ (ಅಮೆರಿಂಡಿಯನ್) ಪ್ರದೇಶವು ಕೆನಾಡಾದ ಕ್ಯಬೆಕ್ ಮತ್ತು ಒಂಟಾರಿಯೋ ಪ್ರಾತ್ಯಗಳು ಹಾಗೂ ಯುಎಸ್ ಎ ನಡುವೆ ಇದೆ. ಗಡಿ ದಾಟಿದರೆ ಮೊದಲೇ ಗೊತ್ತಾದ ಏಜೆಂಟರು ಅವರನ್ನು ನ್ಯೂಯಾರ್ಕ್ ತಲುಪಿಸುತ್ತಾರೆ. ತಿಳಿದಿರದ ಪ್ರದೇಶದಲ್ಲಿ ಗಡಿ ದಾಟುವ ತುಂಬ ಜನ ಹೀಗೆ ದುರಂತ ಅಂತ್ಯ ಕಾಣುತ್ತಾರೆ.
ಅಕ್ರಮವಾಗಿ ಕೆನಡಾ ಮೂಲಕ ಅಮೆರಿಕ ಪ್ರವೇಶಿಸಲು ಯತ್ನಿಸಿದ ಭಾರತೀಯ ಕುಟುಂಬ ಸಾವು
Prasthutha|