ಬ್ಯಾಲೆಟ್ ಪೇಪರ್ ಬಳಸಲು ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಸ್ವತಂತ್ರ ಅಭ್ಯರ್ಥಿ ಅರ್ಜಿ

Prasthutha|

ಉ.ಪ್ರದೇಶ: ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಿ ಮುಂದಿನ ಲೋಕಸಭೆ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ನಡೆಸುವಂತೆ ನಿರ್ದೇಶನ ನೀಡಲು ಕೋರಿ ವಕೀಲ ಹಾಗೂ ಉತ್ತರ ಪ್ರದೇಶದ ರಾಂಪುರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಮೆಹಮೂದ್ ಪ್ರಾಚಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

- Advertisement -

1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು 1961ರ ಚುನಾವಣಾ ನಿಯಮಗಳ ನಡವಳಿಕೆಯ ಪ್ರಕಾರ ಕೇವಲ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆಗಳನ್ನು ನಡೆಸಬೇಕು ಎಂದುಅವರು ವಾದಿಸಿದ್ದಾರೆ.

ಜನ ಪ್ರತಿನಿಧಿ ಕಾಯ್ದೆ ಪ್ರಕಾರ ಮತಪತ್ರಗಳ ಬದಲಿಗೆ ಮತಯಂತ್ರಗಳನ್ನು ಬಳಸುವಂತಿಲ್ಲ ಎಂದು ಪ್ರಾಚಾ ಗಮನ ಸೆಳೆದಿದ್ದಾರೆ.

- Advertisement -

ಪ್ರಾಚಾ ಅವರ ಅರ್ಜಿಯನ್ನು ವಕೀಲರಾದ ಆರ್‌ಹೆಚ್‌ಎ ಸಿಕಂದರ್ ಮತ್ತು ಜತಿನ್ ಭಟ್ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದಾರೆ.



Join Whatsapp