ಪ್ರವಾದಿ ಮುಹಮ್ಮದ್ ಕುರಿತು ಪ್ರಬಂಧ ಸ್ಪರ್ಧೆ: ಶಾಲೆಗೆ ನುಗ್ಗಿದ  ಶ್ರೀರಾಮಸೇನಾ ಕಾರ್ಯಕರ್ತರು

Prasthutha|

ಗದಗ: ಪ್ರವಾದಿ ಮುಹಮ್ಮದ್ ಅವರ ಕುರಿತು ಪ್ರಬಂಧ ಬರೆಯುವಂತೆ ವಿದ್ಯಾರ್ಥಿಗಳಿಗೆ ಹೇಳಿದ್ದಾರೆಂದು ಆರೋಪಿಸಿ ಶ್ರೀರಾಮಸೇನಾ ಕಾರ್ಯಕರ್ತರು ಶಾಲೆಗೆ ನುಗ್ಗಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ಗದಗ ಜಿಲ್ಲೆಯ ನಾಗಾವಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

- Advertisement -

ಮುಖ್ಯಶಿಕ್ಷಕರು ಶ್ರೀರಾಮಸೇನಾ ಕಾರ್ಯಕರ್ತರು ಶಾಲೆಗೆ ನುಗ್ಗಿ ಮುಖ್ಯೋಪಾಧ್ಯಾಯ ಅಬ್ದುಲ್ ಮುನಾಫರ್ ಬಿಜಾಪುರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ವಿದ್ಯಾರ್ಥಿಗಳ ಮತಾಂತರಕ್ಕೆ ಪ್ರೋತ್ಸಾಹಿಸುತ್ತಿದ್ದಾರೆ ಎಂದು ಶ್ರೀರಾಮಸೇನಾ ಕಾರ್ಯಕರ್ತರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಬರಹ ಕೌಶಲ್ಯ ಸುಧಾರಿಸುವ ಸಲುವಾಗಿ ಈ ಬಾರಿ ಪ್ರವಾದಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಿದ್ದೇವೆ ಎಂದು ಮುಖ್ಯೋಪಾಧ್ಯಾಯ ಅಬ್ದುಲ್  ಅವರು ತಿಳಿಸಿದ್ದಾರೆ.

- Advertisement -

ಪ್ರತಿ ತಿಂಗಳು ನಾವು ಸ್ಪರ್ಧೆಗಳನ್ನು ನಡೆಸುತ್ತೇವೆ. ಕನಿಷ್ಠ ಒಂದು ಅಥವಾ ಎರಡು ಕಾರ್ಯಕ್ರಮಗಳು ನಡೆಯುತ್ತವೆ. ಕನಕದಾಸರು, ಪುರಂದರ ದಾಸರು ಮತ್ತು ಇತರ ವ್ಯಕ್ತಿಗಳ ಕುರಿತು ಈ ಹಿಂದೆಯೂ ಕಾರ್ಯಕ್ರಮಗಳು ಮತ್ತು ಪ್ರಬಂಧ ಸ್ಪರ್ಧೆಗಳನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳಿಗೆ ಹಲವು ವ್ಯಕ್ತಿತ್ವಗಳನ್ನು ಪರಿಚಯಿಸಲು ಮತ್ತು ಅವರ ಕೈಬರಹವನ್ನು ಸುಧಾರಿಸಲು ಈ ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ. ಅದರಂತೆ ಈ ಬಾರಿಯೂ ಪ್ರವಾದಿಯವರ ಬಗ್ಗೆ ಪ್ರಬಂಧ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.



Join Whatsapp