ಬಳ್ಳಾರಿ: ಕರೆಂಟ್ ಕಂಬವೇರಿದ್ದ ಎಲೆಕ್ಟ್ರೀಷಿಯನ್ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ನಡೆದಿದೆ.
ಭದ್ರ(33) ಮೃತ ಎಲೆಕ್ಟ್ರೀಷಿಯನ್.
ಮೃತ ಭದ್ರ ದಮ್ಮೂರು ಗ್ರಾಮದಲ್ಲಿ ವ್ಯವಸಾಯದ ಜೊತೆಗೆ ಎಲೆಕ್ಟ್ರೀಷಿಯನ್ ಕೆಲಸವನ್ನು ಮಾಡಿಕೊಂಡಿದ್ದರು. ರೈತರು ಹೊಲಗಳಿಗೆ ನೀರು ಹರಿಸಲು ಲೈನಿನ ವೈರ್ಗೆ ಕನೆಕ್ಷನ್ ಕೊಡಲು ಭದ್ರನಿಗೆ ಹೇಳುತ್ತಾರೆ. ಎಂದಿನಂತೆ ಕನೆಕ್ಷನ್ ಕೊಡಲು ಭದ್ರ ಕಂಬವೇರೆದ್ದರು. ಆದರೆ ಲೈನ್ನಲ್ಲಿ ದಿಢೀರನೇ ವಿದ್ಯುತ್ ಹರಿದ ಪರಿಣಾಮ ಭದ್ರ ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದಾರೆ. ಜೊತೆಗೆ ಅವರ ರುಂಡ ಮುಂಡ ಬೇರೆಯಾಗಿ ಕೆಳಗೆ ಬಿದ್ದಿದೆ.
ಇನ್ನು ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುರುಗೋಡು ಪೊಲೀಸರು ತೆರಳಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.