ಗಾಝಾ: ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ ಯಾರು ಜಯಿಸುತ್ತಾರೋ ಗೊತ್ತಿಲ್ಲ. ಆದರೆ ಸಾವಿರಾರು ಅಮಾಯಕರು ಜೀವ ತೆತ್ತು ಮನುಷ್ಯತ್ವ ದಯನೀಯ ಸೋಲು ಕಂಡಿದೆ. ತಮ್ಮ 42 ಸಂಬಂಧಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕನ್ ಕುಟುಂಬ ಹೇಳಿಕೊಂಡ ಘಟನೆಗೂ ಈ ಯುದ್ಧ ಸಾಕ್ಷಿಯಾಗಿದೆ. ತಾರಿಕ್ ಹಮೂದಾ ಮತ್ತು ಅವರ ಪತ್ನಿ ಮನಾಲ್ ಒಂದು ವಾರದಲ್ಲಿ ತಮ್ಮ ಕುಟುಂಬದ ಮೂರು ತಲೆಮಾರುಗಳನೇ ಕಳೆದುಕೊಂಡಿದ್ದಾರೆ.
ಅಕ್ಟೋಬರ್ 19 ರಂದು ತಮ್ಮ ಮನೆಯನ್ನು ನಾಶಪಡಿಸಿದ ಎರಡು ಸ್ಫೋಟಗಳಲ್ಲಿ ತನ್ನ ಪತ್ನಿ ನಾಲ್ಕು ಸಹೋದರರು, ಒಬ್ಬ ಸಹೋದರಿ ಮತ್ತು ಅವರ ಹೆಚ್ಚಿನ ಮಕ್ಕಳನ್ನು ಕಳೆದುಕೊಂಡಿದ್ದಾರೆ ಎಂದು ತಾರಿಕ್ ಸುದ್ದಿ ಸಂಸ್ಥೆಗೆ ತಿಳಿದಿದ್ದಾರೆ.
ಕಳೆದ ರಾತ್ರಿ ನಡೆದಂತ ಇಸ್ರೇಲ್ ದಾಳಿಯಲ್ಲಿ ತಾರಿಕ್ ತನ್ನ ಹೆಂಡತಿಯನ್ನು ಕಳೆದುಕೊಂಡಿದ್ದಾರೆ. ಅವಳು ತನ್ನ ಕುಟುಂಬದ ಪ್ರತಿಯೊಬ್ಬರು ಸದಸ್ಯರನ್ನು ಪ್ರೀತಿಸುತ್ತಿದ್ದಳು. ನನ್ನೊಂದಿಗೆ ಕಷ್ಟದ ದಿನಗಳನ್ನು ಕಳೆದಿದ್ದಳು ಅಂತ ದುಖ ಹೊರ ಹಾಕಿದ್ದಾರೆ. ಅವರು ಗಾಝಾದ ಒಂದೇ ನೆರೆಹೊರೆಯಲ್ಲಿ ವಾಸಿಸುತ್ತಿದ್ದರು 2004 ರಲ್ಲಿ ಯುನೈಟೆಡ್ ಸ್ಟೇಟ್ಸ್ಗೆ ಸ್ಥಳಾಂತರಗೊಂಡಿದ್ದರು.
ತನ್ನ ಸಂಬಂಧಿಕರ ಸಾವಿನಿಂದಾಗಿ ಹಮ್ಜಾ ತಡೆಯಲಾರದ ದುಃಖ ವ್ಯಕ್ತಪಡಿಸಿದರು ಮತ್ತು ಯುದ್ಧ ಪೀಡಿತ ಪ್ರದೇಶದಲ್ಲಿ ಬದುಕುಳಿದವರ ಬಗ್ಗೆ ಇನ್ನೂ ಭಯಭೀತರಾಗಿದ್ದಾರೆ ಎಂದು ವರದಿಯಾಗಿದೆ.
ಮನಾಲ್ ಅವರ ಸೋದರಸಂಬಂಧಿ ಇಯಾದ್ ಅಬು ಶಬಾನ್ ಕೂಡ ತಮ್ಮ ಸಂಬಂಧಿಕರ ನಿಧನದಿಂದ ಅಷ್ಟೇ ವಿಚಲಿತರಾಗಿದ್ದಾರೆ. ಮೃತರ ವಯಸ್ಸು 3 ತಿಂಗಳಿನಿಂದ 7 ವರ್ಷದೊಳಗಿತ್ತು.
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಕನಿಷ್ಠ 8,485 ಫ್ಯಾಲೆಸ್ತೀನೀಯರು ಸಾವನ್ನಪ್ಪಿ 21,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 1.4 ಮಿಲಿಯನ್ ಜನರು ನಿರಾಶ್ರಿತರಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ತಿಳಿಸಿದೆ.