ಅನಿಕ್ಷಾ ವಿರುದ್ಧ ಎಫ್’ಐಆರ್ ದಾಖಲಿಸಿದ ಅಮೃತ ಫಡ್ನವೀಸ್

Prasthutha|

ಮುಂಬೈ: ವಿನ್ಯಾಸಕಾರ ಅನಿಕ್ಷಾ ವಿರುದ್ಧ ವಂಚನೆ ಮತ್ತು ಒಂದು ಕ್ರಿಮಿನಲ್ ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಒಂದು ಕೋಟಿ ರೂ. ಲಂಚ ಕೊಡಲು ಬಂದಿದ್ದರು ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತ ಫಡ್ನವೀಸ್ ಅವರು ಎಫ್’ಐಆರ್ ದಾಖಲಿಸಿದ್ದಾರೆ.

- Advertisement -


ಕಳೆದ 16 ತಿಂಗಳುಗಳಿಂದ ಅನಿಕ್ಷಾ ಪರಿಚಯವಿದ್ದು, ಹಲವು ಬಾರಿ ಮನೆಗೆ ಬಂದಿದ್ದಾರೆ ಎಂದು ಅಮೃತ ಎಫ್’ಐಆರ್’ನಲ್ಲಿ ತಿಳಿಸಿದ್ದಾರೆ.
ಮುಂಬೈಯ ಮಲಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 20 ಎಂದು ಎಫ್’ಐಆರ್’ ದಾಖಲಾಗಿದೆ.
ಅನಿಕ್ಷಾ ಹಣ ಸಂಪಾದಿಸುವ ಕೆಲವು ಬುಕ್ಕಿಗಳ ಮಾಹಿತಿಯನ್ನು ಅಮೃತರಿಗೆ ತಿಳಿಸಿರುವುದಾಗಿಯೂ, ಈ ಸಂಬಂಧ ಪೊಲೀಸ್ ಮೊಕದ್ದಮೆಯೊಂದರಲ್ಲಿ ಸಿಕ್ಕಿ ಬಿದ್ದಿರುವ ತಂದೆಯನ್ನು ಬಿಡಿಸಲು ಒಂದು ಕೋಟಿ ರೂಪಾಯಿ ಲಂಚ ಕೊಡಲು ಬಂದಿರುವುದಾಗಿಯೂ ಎಫ್’ಐಆರ್ ಹೇಳಿದೆ.


ಫೆಬ್ರವರಿ 18 ಮತ್ತು 19ರಂದು ಅಪರಿಚಿತ ಸಂಖ್ಯೆಯೊಂದರಿಂದ ಅನಿಕ್ಷಾ ಹಲವು ವೀಡಿಯೋ ಕ್ಲಿಪ್’ಗಳು, ಧ್ವನಿ ಸಂದೇಶ ಮತ್ತಿತರ ಮೆಸೇಜ್ ಮಾಡಿರುವುದಾಗಿ ಅಮೃತ ಫಡ್ನವೀಸ್ ಎಫ್ಐಆರ್’ನಲ್ಲಿ ಹೇಳಿದ್ದಾರೆ. ತಂದೆಯ ಜೊತೆಗೆ ಅನಿಕ್ಷಾ ನನ್ನನ್ನು ಬೆದರಿಸುವ, ನನ್ನನ್ನು ವಂಚಿಸುವ ಕೆಲಸದಲ್ಲಿ ತೊಡಗಿರುವುದಾಗಿಯೂ ಅಮೃತ ದೂರಿದ್ದಾರೆ.
ಅನಿಕ್ಷಾ ಮತ್ತು ಆಕೆಯ ತಂದೆಯನ್ನು ಇಬ್ಬರು ಆರೋಪಿಗಳಾಗಿ ಎಫ್’ಐಆರ್’ನಲ್ಲಿ ಹೆಸರಿಸಲಾಗಿದೆ. ಅಮೃತರನ್ನು ಸಂಪರ್ಕಿಸಲು ಬಳಸಿದ ಪೋನ್ ನಂಬರ್ ಆಕೆಯ ತಂದೆಯದು ಎಂದು ಹೇಳಲಾಗಿದ್ದು, ಮಾಧ್ಯಮವು ಆ ನಂಬರಿಗೆ ಹಲವು ಬಾರಿ ಕರೆ ಮಾಡಿದರೂ ಅದು ಸಂಪರ್ಕಕ್ಕೆ ಸಿಕ್ಕಿಲ್ಲ.

- Advertisement -


ಭಾರತೀಯ ದಂಡ ಸಂಹಿತೆಯ ಸಂಚು120(ಬಿ) ಹಾಗೂ 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 8 ಮತ್ತು 12ನೇ ವಿಧಿಗಳಡಿ ಪೊಲೀಸರು ಅನಿಕ್ಷಾ ಮತ್ತು ಅವರ ತಂದೆಯ ಮೇಲೆ ಮೊಕದ್ದಮೆ ಹೂಡಿದ್ದಾರೆ. 8ನೇ ವಿಧಿಯು ಸಾರ್ವಜನಿಕ ಸೇವೆಯಲ್ಲಿರುವವರನ್ನು ಭ್ರಷ್ಟ ಮತ್ತು ಕಾನೂನುಬಾಹಿರ ಕೆಲಸಕ್ಕೆ ಎಳೆಯುವುದನ್ನು ಹಾಗೂ 12ನೇ ವಿಧಿಯು ಭ್ರಷ್ಟತೆಗೆ ಕುಮ್ಮಕ್ಕು ಕೊಡುವುದರ ಬಗ್ಗೆ ಇದೆ ಎಂದು ತಿಳಿದುಬಂದಿದೆ.



Join Whatsapp