ಎಎಂಎಂಕೆ ಮುಖಂಡ ಟಿ.ಟಿ.ವಿ.ದಿನಕರನ್ ಆಸ್ಪತ್ರೆಗೆ ದಾಖಲು

Prasthutha|

ಚೆನ್ನೈ: ಅಮ್ಮಾ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಸ್ಥಾಪಕ ಮತ್ತು ಮಾಜಿ ಶಾಸಕ ಟಿಟಿವಿ ದಿನಕರನ್ ಅವರನ್ನು ಆರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆಗಾಗಿ ಶುಕ್ರವಾರ ಇಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

ಎರಡು ದಿನಗಳ ನಂತರ ತಮ್ಮ ಮನೆಗೆ ಮರಳಬಹುದು ಎಂದು ವೈದ್ಯರು ಹೇಳಿದ್ದಾರೆ. ಆದ್ದರಿಂದ ಆಸ್ಪತ್ರೆಯಲ್ಲಿ ತಮ್ಮನ್ನು ಭೇಟಿಯಾಗದಂತೆ ಪಕ್ಷದ ಕಾರ್ಯಕರ್ತರನ್ನು ವಿನಂತಿಸಿದ್ದಾರೆ ಎಂದು ದಿನಕರನ್ ಟ್ವೀಟ್ ಮಾಡಿರುವುದಾಗಿ ವರದಿಯಾಗಿದೆ.



Join Whatsapp