₹31 ಕೋಟಿಗೆ ಖರೀದಿಸಿ ₹83 ಕೋಟಿಗೆ ಫ್ಲ್ಯಾಟ್ ಮಾರಾಟ ಮಾಡಿದ ಅಮಿತಾಬ್ ಬಚ್ಚನ್: ದುಪ್ಪಟ್ಟು ಲಾಭ

Prasthutha|

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಮುಂಬೈನ ಒಶಿವಾರದಲ್ಲಿರುವ ತಮ್ಮ ಡ್ಯುಪ್ಲೆಕ್ಸ್ ಅಪಾರ್ಟ್ ಮೆಂಟ್ ಅನ್ನು ಬರೋಬ್ಬರಿ 83 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. 1.55 ಎಕರೆ ಪ್ರದೇಶದಲ್ಲಿರುವ ಈ ಅಪಾರ್ಟ್ ಮೆಂಟ್ 5074 ಚ.ಅ. ಪ್ರದೇಶದಲ್ಲಿ ನಿರ್ಮಾಣವಾಗಿದೆ.

- Advertisement -

2021ರ ಏಪ್ರಿಲ್ ನಲ್ಲಿ ಈ ಅಪಾರ್ಟ್ ಮೆಂಟ್ ಅನ್ನು ಅಮಿತಾಬ್ ಬಚ್ಚನ್ ಅವರು ₹31 ಕೋಟಿಗೆ ಖರೀದಿಸಿದ್ದರು. ಇದೀಗ ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ (ಐಜಿಆರ್) ಪ್ರಕಾರ, ಈ ಅಪಾರ್ಟ್ ಮೆಂಟ್ ಅನ್ನು ₹83 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಂತೆ ಅಮಿತಾಬ್ ಅವರು ಶೇ 168ರಷ್ಟು ಲಾಭ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ಆದರೆ ಈ ಮನೆಯನ್ನು ಅಮಿತಾಬ್ ಬಚ್ಚನ್ ಮಾರಾಟ ಮಾಡಿದ್ದೇಕೆ ಅನ್ನೋ ಪ್ರಶ್ನೆಗಳು ಎದುರಾಗಿದೆ. ಅಮಿತಾಬ್ ಬಚ್ಚನ್ ಬೇರೆ ಮನೆ ಖರೀದಿಗೆ ಮುಂದಾಗಿದ್ದಾರ? ಅಥವಾ ಈ ಮೊತ್ತವನ್ನು ಬೇರೆ ಕಡೆ ಹೂಡಿಕೆ ಮಾಡುತ್ತಾರಾ? ಅನ್ನೋ ಚರ್ಚೆ ಜೋರಾಗಿದೆ.



Join Whatsapp