ವಯನಾಡ್‌ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಅಮಿತ್ ಶಾ ಹೇಳಿಕೆ ಸುಳ್ಳು: ಪಿಣರಾಯಿ ವಿಜಯನ್

Prasthutha|

ತಿರುವನಂತಪುರ: ವಯನಾಡ್‌ ಭೂ ಕುಸಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿದ್ದಾರೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

- Advertisement -

ತಿರುವನಂತಪುರನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಪಿಣರಾಯಿ, ಕೇರಳಕ್ಕೆ ನೀಡಿದ್ದ ಎಚ್ಚರಿಕೆಗಳನ್ನು ಅಲ್ಲಿನ ಸರಕಾರ ನಿರ್ಲಕ್ಷಿಸಿತು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೀಡಿದ ಹೇಳಿಕೆಗೆ ಪಿಣರಾಯಿ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಐಎಂಡಿ, ಭಾರತೀಯ ಭೌಗೋಳಿಕ ಸರ್ವೇಕ್ಷಣ ಸಂಸ್ಥೆ (ಜಿಎಸ್‌ಐ) ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ)ವೂ ಸೇರಿ ಯಾರೂ ರೆಡ್‌ ಅಲರ್ಟ್‌ ನೀಡಿಲ್ಲ. ಐಎಂಡಿ ಆರೆಂಜ್‌ ಅಲರ್ಟ್‌ ನೀಡಿತ್ತು. ಇದು 115 ಮಿ.ಮೀ.ನಿಂದ 204 ಮಿ.ಮೀ.ವರೆಗಿನ ಮಳೆ ಸೂಚಿಸುತ್ತದೆ. ಆದರೆ ವಯನಾಡ್ ದುರಂತಕ್ಕೆ ಮೊದಲು ಮುಂಡಕೈನಲ್ಲಿ 572 ಮಿ.ಮೀ. ಮಳೆಯಾಗಿದೆ. ಭೂ ಕುಸಿತವಾದ ಬಳಿಕ ಬೆಳಗ್ಗೆ 6 ಗಂಟೆಗೆ ಐಎಂಡಿ ರೆಡ್‌ ಅಲರ್ಟ್‌ ನೀಡಿದೆ ಎಂದು ಅವರು ತಿಳಿಸಿದ್ದಾರೆ.

- Advertisement -

ಕೇಂದ್ರದ ಸಂಸ್ಥೆಗಳು‌ ಕೂಡ ಒಂದು ಬಾರಿಯೂ ವಯನಾಡಿನಲ್ಲಿ ರೆಡ್ ಅಲರ್ಟ ನೀಡಿರಲಿಲ್ಲ, ಯಾವ ಮುನ್ನೆಚ್ಚರಿಕೆಯೂ ನೀಡಿಲ್ಲ ಎಂದು ಪಿಣರಾಯಿ ವಿಜಯನ್‌ ಹೇಳಿದ್ದಾರೆ.



Join Whatsapp