ಮೊದಲ MBBS ಹಿಂದಿ ಪಠ್ಯಪುಸ್ತಕಗಳನ್ನು ಅ.16 ರಂದು ಬಿಡುಗಡೆಗೊಳಿಸಲಿರುವ ಅಮಿತ್ ಶಾ

Prasthutha|

ನವದೆಹಲಿ: ದೇಶದ ಮೊದಲ ಹಿಂದಿ ಭಾಷೆಯ ಎಂಬಿಬಿಎಸ್(MBBS) ಪಠ್ಯಪುಸ್ತಕಗಳನ್ನು ಅಕ್ಟೋಬರ್ 16 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯ ಪ್ರದೇಶದಲ್ಲಿ ಅನಾವರಣಗೊಳಿಸಲಿದ್ದಾರೆ.
ಮಧ್ಯಪ್ರದೇಶ ಸರ್ಕಾರದ ಮಹತ್ವಾಕಾಂಕ್ಷೆಯ “ಶಿಕ್ಷಣದ ಸುಲಭತೆ” ಉಪಕ್ರಮದ ಭಾಗವಾಗಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೊದಲ ವರ್ಷದ ಪಠ್ಯಪುಸ್ತಕಗಳ ಅನುವಾದಿತ ಆವೃತ್ತಿಗಳನ್ನು ಬಿಡುಗಡೆಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -


ಈ ಯೋಜನೆಯೊಂದಿಗೆ ಮಧ್ಯಪ್ರದೇಶವು ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣ ನೀಡಿದ ದೇಶದ ಮೊದಲ ರಾಜ್ಯವಾಗಲಿದೆ.
ರಾಜ್ಯದ ಎಲ್ಲಾ 13 ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಈ ಪುಸ್ತಕಗಳಲ್ಲಿ ವೈಜ್ಞಾನಿಕ ಮತ್ತು ಜೀವಶಾಸ್ತ್ರ ಸಂಬಂಧಿ ಪದಗಳನ್ನು ದೇವನಾಗರಿ ಲಿಪಿಯಲ್ಲಿ ಹಾಗೂ ವಿವರಣೆಗಳನ್ನು ಹಿಂದಿಯಲ್ಲಿ ಕೊಡಲಾಗಿದೆ.


ಮಧ್ಯಪ್ರದೇಶ ಸರ್ಕಾರವು ಹಿಂದಿಯನ್ನು ಮುಂದಕ್ಕೆ ಕೊಂಡೊಯ್ಯಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಹೇಳಿದ್ದಾರೆ.ಇದರ ಅಡಿಯಲ್ಲಿ, ನಾವು ಕೋರ್ಸ್ ಮೆಟೀರಿಯಲ್ ಅನ್ನು ಹಿಂದಿಗೆ ಭಾಷಾಂತರಿಸಿದ್ದೇವೆ. ನಾವು ಮೊದಲ ಹಂತದಲ್ಲಿ ಮೂರು ಮೊದಲ ವರ್ಷದ ಕೋರ್ಸ್ ಗಳನ್ನು ಸೇರಿಸಿದ್ದೇವೆಎಂದು ಅವರು ಹೇಳಿದರು.
ಮಧ್ಯ ಪ್ರದೇಶದಲ್ಲಿ ವೈದ್ಯಕೀಯ ಕೋರ್ಸಿನ ಹಿಂದಿ ಪಠ್ಯಪುಸ್ತಕಗಳನ್ನು ಇದೇ ಶೈಕ್ಷಣಿಕ ವರ್ಷಕ್ಕಾಗಿ ಬಿಡುಗಡೆಗೊಳಿಸಲಾಗುವುದು. ಹೀಗೆ ಈ ಪಠ್ಯದ ಆಧಾರದಲ್ಲಿ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಪದವಿ ಪ್ರಮಾಣಪತ್ರಗಳಲ್ಲಿ ಅವರ ಶಿಕ್ಷಣ ಮಾಧ್ಯಮವನ್ನು ಉಲ್ಲೇಖಿಸಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

- Advertisement -


ಈ ಹಿಂದೆ ಮಧ್ಯ ಪ್ರದೇಶದಲ್ಲಿ ಇಂಜಿನಿಯರಿಂಗ್ ಕೋರ್ಸುಗಳಿಗೆ ಹಿಂದಿ ಪಠ್ಯಪುಸ್ತಕ ಜಾರಿಗೊಳಿಸುವ ವಿಫಲ ಯತ್ನಗಳು ನಡೆದಿದ್ದವು.
ಹಿಂದಿ ಭಾಷಿಕರ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ ಮತ್ತು ಗುಜರಾತ್ನಲ್ಲಿ ಉನ್ನತ ಶಿಕ್ಷಣವನ್ನು ಹಿಂದಿ ಮಾಧ್ಯಮದಲ್ಲಿ ನೀಡುವ ಕುರಿತು ಸಂಸದೀಯ ಸಮಿತಿಯೊಂದು ಇತ್ತೀಚೆಗೆ ಶಿಫಾರಸು ಮಾಡಿತ್ತು. ಹಿಂದಿಯೇತರ ರಾಜ್ಯಗಳಾದ ತಮಿಳುನಾಡಿನಲ್ಲಿ ಆಯಾ ರಾಜ್ಯಗಳ ಅಧಿಕೃತ ಭಾಷೆಗಳಲ್ಲಿ ಶಿಕ್ಷಣಕ್ಕೆ ಶಿಫಾರಸು ಮಾಡಲಾಗಿತ್ತು.



Join Whatsapp