ಸ್ವಾತಂತ್ರ್ಯದ ಅಮೃತ ಮಹೋತ್ಸವದಂದೇ ನಾಗಾಲ್ಯಾಂಡ್, ಮಣಿಪುರದಲ್ಲಿ ನಾಗ ಧ್ವಜಾರೋಹಣ

Prasthutha|

ಇಂಫಾಲ: ದೇಶದೆಲ್ಲೆಡೆ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿರುವಾಗ ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಹರ್ ಘರ್ ತಿರಂಗ’ ಅಭಿಯಾನಕ್ಕೆ ಕರೆ ನೀಡಿರುವ ಮಧ್ಯೆ ನಾಗಾಲ್ಯಾಂಡ್ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ನಾಗ ಧ್ವಜವನ್ನು ಹಾರಿಸಲಾಗಿದೆ.

- Advertisement -

ನಾಗಾಲ್ಯಾಂಡ್ ಮತ್ತು ಮಣಿಪುರದ ಕೆಲವು ಪ್ರದೇಶಗಳಲ್ಲಿ ಪ್ರತಿ ಮನೆ, ಅಂಗಡಿ ಮತ್ತು ಇತರ ಸಂಸ್ಥೆಗಳಲ್ಲಿ ನಾಗ ಧ್ವಜ ರಾರಾಜಿಸುತ್ತಿದ್ದವು ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಸರ್ಕಾರ ಮತ್ತು ನಾಗಾ ಸಶಸ್ತ್ರ ಗುಂಪುಗಳೊಂದಿಗೆ 1997 ರಿಂದ ನಡೆಯುತ್ತಿರುವ ನಾಗ ಶಾಂತಿ ಮಾತುಕತೆ ಮುಂದುವರಿದ ಹಂತದಲ್ಲಿದ್ದರೂ, ಅಂತಿಮವಾಗಿ ಪ್ರತ್ಯೇಕ ನಾಗ ಧ್ವಜಕ್ಕೆ ಮಾನ್ಯತೆ ನೀಡಬೇಕೆಂಬ ಬೇಡಿಕೆಯ ಹಿನ್ನೆಲೆಯಲ್ಲಿ ಅತಿದೊಡ್ಡ ನಾಗ ಸಶಸ್ತ್ರ ಗುಂಪು (NSCN (IM)) ವತಿಯಿಂದ ರಸ್ತೆ ತಡೆ ಪ್ರತಿಭಟನೆಯನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

Join Whatsapp