ವಾಷಿಂಗ್ಟನ್: ಅಪ್ರಾಪ್ತ ಯುವಕನೊಬ್ಬ ದಿನಸಿ ಅಂಗಡಿಯಲ್ಲಿ ರಾಬರಿ ಮಾಡಿದ ಬಳಿಕ ಅಂಗಡಿ ಮಾಲಕನನ್ನು ಗುಂಡಿಟ್ಟು ಕೊಂಡ ಘಟನೆ ಅಮೆರಿಕದ ನಾರ್ತ್ ಕ್ಯಾರೋಲಿನಾದ ಸ್ಯಾಲಿಸ್ಬರಿಯಲ್ಲಿ ನಡೆದಿದೆ. ಗುಜರಾತ್ನ ವಡೋದರ ಮೂಲದ ದಿನಸಿ ಅಂಗಡಿ ಮಾಲೀಕ ಮೈನಾಕ್ ಪಟೇಲ್ರನ್ನು ಕೊಲೆಯಾದವರು.
ಟೊಬಾಕೋ ಹೌಸ್ ಹೆಸರಿನ ದಿನಸಿ ಅಂಗಡಿ ದರೋಡೆಗೆ ಮುಂದಾದ ಅಪ್ರಾಪ್ತ, ಮಾಲೀಕರಾದ ಮೈನಾಕ್ ಪಟೇಲ್ರನ್ನು ಗುಂಡು ಹಾರಿಸಿ ಕೊಂದಿದ್ದಾನೆ. ಮೈನಾಕ್ ಪಟೇಲ್ ಹೆಂಡತಿ ಏಳು ತಿಂಗಳ ಗರ್ಭಿಣಿಯಾಗಿದ್ದು, ಗಂಡನ ಹತ್ಯೆ ಆಕೆಗೆ ಆಘಾತ ತಂದಿದೆ.
ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಆದ ಆತ ಅಪ್ರಾಪ್ತನಾಗಿರುವ ಕಾರಣ ಹೆಸರು ಬಹಿರಂಗಪಡಿಸಲಾಗುವುದಿಲ್ಲ ಎಂದು ರೋವನ್ ಕಂಟ್ರಿ ಶರಿಫ್ನ ತನಿಖಾಧಿಕಾರಿಗಳು ತಿಳಿಸಿದ್ದಾರೆ.