ಅಮೆರಿಕ: ಗುಂಡಿನ ದಾಳಿಗೆ 6 ತಿಂಗಳ ಮಗು ಸೇರಿ ಆರು ಮಂದಿ ಮೃತ್ಯು

Prasthutha|

ಕ್ಯಾಲಿಫೋರ್ನಿಯಾ: ಅಮೆರಿಕಾದ ಮಧ್ಯ ಕ್ಯಾಲಿಫೋರ್ನಿಯಾದ ಗೋಶೆನ್ ನ ಮನೆಯೊಂದರಲ್ಲಿ ಸೋಮವಾರ ಮುಂಜಾನೆ ಗುಂಡಿನ ದಾಳಿ ನಡೆದಿದ್ದು, ದಾಳಿಯಲ್ಲಿ 6 ತಿಂಗಳ ಮಗು, ತಾಯಿ ಸೇರಿದಂತೆ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

- Advertisement -

ಗುಂಡಿನ ದಾಳಿ ನಡೆಸಿದ ಇಬ್ಬರು ಹಂತಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಗೋಶೆನ್ ಎಂಬಲ್ಲಿ ಇಬ್ಬರು ವ್ಯಕ್ತಿಗಳು ಮನೆಯ ಮೇಲೆ ದಾಳಿ ನಡೆಸಿ, ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ 17 ವರ್ಷದ ತಾಯಿ ಮತ್ತು(ಅವಳ) ಆರು ತಿಂಗಳ ಮಗು ತಲೆಗೆ ಗುಂಡು ತಾಗಿ ಸಾವನ್ನಪ್ಪಿದ್ದಾರೆ.

- Advertisement -

ಇಬ್ಬರು ಬೀದಿಯಲ್ಲಿ ಗುಂಡಿನ ದಾಳಿಗೆ ಪ್ರಾಯ ಕಳೆದುಕೊಂಡಿದ್ದು, ಮೂರನೇ ವ್ಯಕ್ತಿ ತನ್ನ ನಿವಾಸದ ದ್ವಾರದಲ್ಲಿ ಪ್ರಾಣ ಬಿಟ್ಟಿದ್ದಾನೆ. ಮಗು ಸೇರಿಂತೆ ಮೂವರು ಮನೆಯೊಳಗೆ ಹತ್ಯೆಗೀಡಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Join Whatsapp