ಅಮೆರಿಕ: ಕಮಲಾ ಹ್ಯಾರಿಸ್‌ಗೆ ಸಿಗದ ಒಬಾಮ ಬೆಂಬಲ

Prasthutha|

ನ್ಯೂಯಾರ್ಕ್: ಅಮೇರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಿಂದ ಜೋ ಬೈಡನ್ ಸ್ಪರ್ಧೆಯಿಂದ ಹಿಂದೆ ಸರಿದಿದ್ದು, ಹಾಲಿ ಉಪಾಧ್ಯಕ್ಷ್ಯೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗಿ ಡೆಮಾಕ್ರೆಟಿಕ್ ನಾಯಕರು ಬೆಂಬಲಿಸುತ್ತಿದ್ದಾರೆ. ಆದರೆ ಈ ವರೆಗೂ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಕಮಲಾ ಹ್ಯಾರೀಸ್ ಗೆ ಬೆಂಬಲವನ್ನು ಇನ್ನೂ ಘೋಷಿಸದೇ ಇರುವುದು ಸಾಕಷ್ಟು ಚರ್ಚೆಯಾಗುತ್ತಿದೆ.

- Advertisement -

ಒಬಾಮ ಪ್ರಕಾರ ಕಮಲಾ ಹ್ಯಾರಿಸ್ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನ್ನು ಚುನಾವಣೆಯಲ್ಲಿ ಮಣಿಸುವುದು ಸಾಧ್ಯವಿಲ್ಲ. ಆದ ಕಾರಣ ಒಬಾಮ ಇನ್ನೂ ಕಮಲಾ ಹ್ಯಾರೀಸ್ ಗೆ ಬೆಂಬಲ ಸೂಚಿಸಿಲ್ಲ ಎಂದು ನ್ಯೂ ಯಾರ್ಕ್ ಪೋಸ್ಟ್ ವಿಶ್ಲೇಷಿಸಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರೀಸ್ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂಬುದು ಒಬಾಮಗೆ ತಿಳಿದಿದೆ. ಆದ್ದರಿಂದ ಅವರು ಅಸಮಾಧಾನಗೊಂಡಿದ್ದಾರೆ ಎಂದು ಬೈಡನ್ ಕುಟುಂಬದ ಮೂಲಗಳು ತಿಳಿಸಿರುವುದಾಗಿ ನ್ಯೂಯಾರ್ಕ್ ಪೋಸ್ಟ್ ಹೇಳಿದೆ.



Join Whatsapp