ಬಾಂಗ್ಲಾದೇಶದ ಈಗಿನ ಪರಿಸ್ಥಿತಿಗೆ ಅಮೆರಿಕ ಕಾರಣ: ಶೇಖ್​​ ಹಸೀನಾ ಮೊದಲ ಪ್ರತಿಕ್ರಿಯೆ

Prasthutha|

ನವದೆಹಲಿ: ಹಿಂಸಾತ್ಮಕ ಪ್ರತಿಭಟನೆ ತೀವ್ರಗೊಂಡು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ದೇಶ ತೊರೆದು ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಶೇಖ್​​ ಹಸೀನಾ ತಮ್ಮ ದೇಶದ ಪರಿಸ್ಥಿತಿ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಬಾಂಗ್ಲಾದಲ್ಲಿನ ಈ ಪರಿಸ್ಥಿತಿಗೆ ಹಾಗೂ ತನ್ನ ಸರ್ಕಾರ ಪತನಕ್ಕೆ ಅಮೆರಿಕ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ.

- Advertisement -

ಬಾಂಗ್ಲಾದಲ್ಲಿ ಈ ಪರಿಸ್ಥಿತಿ ಅಮೆರಿಕ ಏಕೆ ಸೃಷ್ಟಿಸಿತು ಎನ್ನುವುದಕ್ಕೆ ಕಾರಣವಿದೆ. ನಾನು ಸೇಂಟ್ ಮಾರ್ಟಿನ್ ದ್ವೀಪದ ಸಾರ್ವಭೌಮತ್ವವನ್ನು ಒಪ್ಪಿಸಿದ್ದರೆ ಮತ್ತು ಬಂಗಾಳ ಕೊಲ್ಲಿಯ ಮೇಲೆ ಹಿಡಿತ ಸಾಧಿಸಲು ಅಮೆರಿಕಕ್ಕೆ ಅವಕಾಶ ನೀಡಿದ್ದರೆ, ಅಧಿಕಾರದಲ್ಲಿ ಉಳಿಯಬಹುದಿತ್ತು ಎಂದು ಶೇಖ್ ಹಸೀನಾ ಹೇಳಿದ್ದಾರೆ.

ಮೂಲಭೂತವಾದಿಗಳ ಮಾತಿನಿಂದ ದಾರಿತಪ್ಪಬೇಡಿ,ದಯವಿಟ್ಟು ಶಾಂತವಾಗಿರಿ ಎಂದು ದೇಶದ ಜನರಲ್ಲಿ ನಾನು ಮನವಿ ಮಾಡುತ್ತೇನೆ ಎಂದರು.

- Advertisement -

ನಾನು ದೇಶದಲ್ಲೇ ಉಳಿದುಕೊಂಡಿದ್ದರೆ ಹೆಚ್ಚಿನ ಸಾವು ಮತ್ತು ವಿನಾಶ ಆಗುತ್ತಿತ್ತು. ಅವರು ವಿದ್ಯಾರ್ಥಿಗಳ ಮೃತ ದೇಹಗಳ ಮೇಲೆ ಅಧಿಕಾರವನ್ನು ಪಡೆಯುವ ಗುರಿಯನ್ನು ಹೊಂದಿದ್ದರು. ಆದರೆ ನಾನು ರಾಜೀನಾಮೆ ನೀಡುವ ಮೂಲಕ ಅದನ್ನು ತಡೆದಿದ್ದೇನೆ. ನೀವು ನನ್ನನ್ನು ಚುನಾವಣೆಯಲ್ಲಿ ಆರಿಸಿದ್ದರಿಂದ ನಿಮಗೆ ನಾಯಕಿಯಾದೆ. ನೀವು ನನ್ನ ಶಕ್ತಿಯಾಗಿದ್ದೀರಿ ಎಂದು ಹಸೀನಾ ಹೇಳಿದರು.

ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ರಜಾಕರ್ಸ್​​​ ಎಂದು ನಾನು ಕರೆದಿಲ್ಲ ಎಂದ ಹಸೀನಾ, ನಿಮ್ಮನ್ನು ಪ್ರಚೋದಿಸಲು ನನ್ನ ಮಾತುಗಳನ್ನು ತಿರುಚಲಾಗಿದೆ ರಾಷ್ಟ್ರವನ್ನು ಅಸ್ಥಿರಗೊಳಿಸಲು ನಿಮ್ಮ ಮುಗ್ದತೆಯನ್ನು ಹೇಗೆ ಬಳಸಿಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ಆ ದಿನದ ಸಂಪೂರ್ಣ ವಿಡಿಯೋವನ್ನು ವೀಕ್ಷಿಸಿ ಎಂದು ವಿದ್ಯಾರ್ಥಿ ಪ್ರತಿಭಟನಾಕಾರರಿಗೆ ಸ್ಪಷ್ಟನೆ ನೀಪಡೆದಿರು.

ಆಗಸ್ಟ್ 5 ರಂದು ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪ್ರತಿಭಟನಾಕಾರರು ಅವರ ನಿವಾಸವನ್ನು ಮುತ್ತಿಗೆ ಹಾಕಿದಾಗ ಮಿಲಿಟರಿ ವಿಮಾನದಲ್ಲಿ ಢಾಕಾದಿಂದ ಪಲಾಯನ ಮಾಡಿದರು. ಪ್ರಸ್ತುತ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ.



Join Whatsapp