ಹಿಂದುತ್ವದ ವಿರುದ್ಧ ಅಮೆರಿಕಾದಲ್ಲಿ ‘ಜಾಗತಿಕ ಹಿಂದುತ್ವ ವಿಸರ್ಜನೆ’ ಸಮ್ಮೇಳನ

Prasthutha|

ವಾಷಿಂಗ್ಟನ್ : ಭಾರತದಲ್ಲಿ ಹಿಂದುತ್ವ ಫ್ಯಾಶಿಸ್ಟ್ ಶಕ್ತಿಗಳಿಂದ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ದಾಳಿ, ಅಲ್ಪಸಂಖ್ಯಾತರ ವಿರುದ್ದ ನಿರಂತರ ದೌರ್ಜನ್ಯ ಭಾರತ ಮತ್ತು ವಿಶ್ವದ ಇತರೆ ಭಾಗಗಳಲ್ಲಿ ಹಿಂದೂ ಸಿದ್ಧಾಂತದ ಪ್ರಾಬಲ್ಯದ ಅನ್ವೇಷಣೆಯ ಗುರಿಯೊಂದಿಗೆ ಅಮೆರಿಕದಲ್ಲಿ ಆನ್ ಲೈನ್ ಜಾಗತಿಕ ಹಿಂದುತ್ವ ವಿಸರ್ಜನೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.

- Advertisement -

ಸೆಪ್ಟೆಂಬರ್ 10 ರಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮವನ್ನು 40 ವಿಶ್ವವಿದ್ಯಾಲಯಗಳ 45 ಕೇಂದ್ರಗಳು ಅಥವಾ ವಿಭಾಗಗಳು ಸಹ ಪ್ರಾಯೋಜಿಸುತ್ತಿವೆ. ಇವುಗಳಲ್ಲಿ ಹೆಚ್ಚಿನವು ಅಮೆರಿಕದ ವಿಶ್ವವಿದ್ಯಾಲಯಗಳಾಗಿವೆ ಎಂದು ಹೆಸರು ಹೇಳಲಿಚ್ಛಿಸದ ಸಮ್ಮೇಳನದ ಸಂಘಟಕರೊಬ್ಬರು ಮಾಹಿತಿ ನೀಡಿದ್ದಾರೆ.

ಸೆಪ್ಟಂಬರ್ 10 ರಿಂದ 12ವರೆಗೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸೆ.10ರಂದು ಬೆಳಗ್ಗೆ 9.30ರಿಂದ ಗ್ಲೋಬಲ್ ಹಿಂದುತ್ವ ಎಂದರೆ ಏನು ?, 11.30 ರಿಂದ ಹಿಂದುತ್ವದ ರಾಜಕೀಯ ಆರ್ಥಿಕತೆ, 1.30ರಿಂದ ಜಾತಿ ಮತ್ತು ಹಿಂದುತ್ವ ಎಂಬ ವಿಚಾರ ಸಂಕಿರಣ ನಡೆಯಲಿದೆ. ಸೆ.11ರಂದು ಬೆಳಗ್ಗೆ 9.30ರಿಂದ ಲಿಂಗ ಮತ್ತು ಹಿಂದುತ್ವದ ಲೈಂಗಿಕ ರಾಜಕೀಯತೆ, 11.30ಕ್ಕೆ ದೇಶದ ಬಾಹ್ಯರೇಖೆ, 1.30ರಿಂದ ಹಿಂದುತ್ವ ವಿಜ್ಞಾನ ಮತ್ತು ಆರೋಗ್ಯ ವಿಷಯದಲ್ಲಿ ವಿಚಾರ ಸಂಕಿರಣ ನಡೆಯಲಿದೆ. ಸೆ.12ರಂದು ಹಿಂದುತ್ವ ಸುಳ್ಳು ಪ್ರಚಾರ ಮತ್ತು ಡಿಜಿಟಲ್ ವ್ಯವಸ್ಥೆ , 11.30ಕ್ಕೆ ಹಿಂದುತ್ವ ಮತ್ತು ಶ್ರೇಷ್ಟ್ರತೆಯ ವ್ಯಸನ ವಿಚಾರದಲ್ಲಿ ಕಾರ್ಯಾಗಾರ ನಡೆಯಲಿದೆ.

- Advertisement -

ಈ ಸಮ್ಮೇಳನದ ವಿವರಗಳನ್ನು ಕಾರ್ಯಕ್ರಮದ ಜಾಲತಾಣದಲ್ಲಿ ಉಲ್ಲೇಖಿಸಲಾಗಿದೆ. ಸಮ್ಮೇಳನದ ಈ ಉದ್ದೇಶವನ್ನು ಅಮೆರಿಕ ದಲ್ಲಿರುವ ವಿವಿಧ ಹಿಂದೂ ಸಮುದಾಯದ ಗುಂಪುಗಳು ವಿರೋಧಿಸಿವೆ. ಭಾರತ ಮತ್ತು ಅಮೆರಿದಲ್ಲಿ ವಿವಿಧ ಹಿಂದೂ ಸಂಘಟನೆಗಳ ವಿರುದ್ಧ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುವವರೇ ಸಮ್ಮೇಳನದಲ್ಲಿ ಭಾಷಣಕಾರರಾಗಿದ್ದಾರೆ ಎಂದು ಈ ಗುಂಪು ಆರೋಪಿಸಿದೆ.

ಸಮ್ಮೇಳನವನ್ನು ಬೆಂಬಲಿಸದಂತೆ ಒತ್ತಾಯಿಸಿ ವಿವಿಧ ವಿಶ್ವವಿದ್ಯಾಲಯಗಳಿಗೆ ಇ–ಮೇಲ್ ಮಾಡಿರುವ ಹಿಂದು ಅಮೆರಿಕನ್ ಫೌಂಡೇಷನ್(ಎಚ್ಎಎಫ್), ‘ಡಿಜಿಎಚ್ ಸಮ್ಮೇಳನದ ಸಂಘಟಕರು, ನಿಮ್ಮ ವಿಶ್ವವಿದ್ಯಾಲಯದ ಹೆಸರನ್ನು ಬಳಸಿಕೊಂಡು ತಮ್ಮ ಕೆಲಸ ಸಾಧಿಸಿಕೊಳ್ಳುತ್ತಿದ್ದಾರೆ. ಇದು ಶೈಕ್ಷಣಿಕ ಸಮ್ಮೇಳನವಲ್ಲ, ಆದರೆ, ಭಾರತದ ರಾಜಕೀಯ ಪಕ್ಷಕ್ಕೆ ಸೇರಿದಂತಹ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿರುವ ಚಳವಳಿಕಾರರು, ಭಾಷಣಕಾರರು ಹಿಂದುತ್ವದ ಬಗೆಗಿರುವ ಗೌರವವನ್ನು ನಿರಾಕರಿಸುತ್ತಲೇ, ಹಿಂದುತ್ವದ ಬಗ್ಗೆ ಭಯ ಹುಟ್ಟಿಸುತ್ತಾರೆ “ ಎಂದು ತಿಳಿಸಿದ್ದಾರೆ.



Join Whatsapp